( New Zealand) ಕಿವೀಸ್ ನಾಡಲ್ಲಿ ಸರಣಿ ಭೂಕಂಪನ : ಸುನಾಮಿ ಸಾಧ್ಯತೆ
ನ್ಯೂಜಿಲೆಂಡ್ : ದಕ್ಷಿಣ ಫೆಸಿಫಿಕ್ ಸಾಗರದಲ್ಲಿ ಸರಣಿ ಪ್ರಬಲ ಭೂಕಂಪನಗಳು ನಡೆದಿದ್ದು, ಬೃಹತ್ ಅಲೆಗಳಿಗೆ ಕಾರಣವಾಗಿದೆ.
ಈ ಹಿನ್ನೆಲೆ ಸುನಾಮಿ ಅಪ್ಪಳಿಸುವ ಭೀತಿ ಎದುರಾಗಿದ್ದು, ನ್ಯೂಝಿಲೆಂಡ್, ಕಲೆಡೋನಿಯಾ ಮತ್ತು ವನುತು ಕರಾವಳಿ ಪ್ರದೇಶಗಳಿಂದ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗುತ್ತಿದೆ.
“ಸುನಾಮಿ ಅಲೆಗಳು ಕಂಡುಬಂದಿವೆ” ಎಂದು ಹವಾಯಿಯಲ್ಲಿರುವ ಫೆಸಿಫಿಕ್ ಸುನಾಮಿ ಮುನ್ನೆಚ್ಚರಿಕೆ ಕೇಂದ್ರ ಹೇಳಿಕೆ ನೀಡಿದೆ.
ಕರಾವಳಿ ಪ್ರದೇಶದ ಜನರ ಸಾಗರ ಚಟುವಟಿಕೆಗಳನ್ನು ಬಿಟ್ಟು ಕೂಡಲೇ ಸಮುದ್ರ ತೀರವನ್ನ ಬಿಡಬೇಕು ಎಂದು ತುರ್ತುಸೇವಾ ವಕ್ತಾರ ಅಲೆಕ್ಸಾಂಡ್ರೆ ರೊಸಿಗ್ನೋಲ್ ಸಾರ್ವಜಿನಿಕ ರೆಡಿಯೋದಲ್ಲಿ ಘೋಷಣೆ ಮಾಡಿದ್ದಾರೆ.
ಇನ್ನು ಈಗಾಗಲೇ ಸಂಭವಿಸಿರುವ ಭೂಕಂಪಗಳಿಂದಾಗಿ ಈವರೆಗೂ ಯಾವುದೇ ಸಾವು ನೋವು ಹಾನಿ ಸಂಭವಿಸಿಲ್ಲ.
ಆದ್ರೆ ಸುನಾಮಿ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಬಹುದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.