ಮುಂದುವರೆದ ಅಪ್ಪು ಅಭಿಮಾನಿಗಳ ಆತ್ಮಹತ್ಯೆ ಸರಣಿ : ಮತ್ತೊಬ್ಬ ಅಭಿಮಾನಿ ಆತ್ಮಹತ್ಯೆಗೆ ಶರಣು

1 min read
Puneet Raj kumar

ಮುಂದುವರೆದ ಅಪ್ಪು ಅಭಿಮಾನಿಗಳ ಆತ್ಮಹತ್ಯೆ ಸರಣಿ : ಮತ್ತೊಬ್ಬ ಅಭಿಮಾನಿ ಆತ್ಮಹತ್ಯೆಗೆ ಶರಣು

ನಟ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನದಿಂದ ಅಪ್ಪು ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿದೆ. ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಹಲವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ಈ ಬಗ್ಗೆ ಅಭಿಮಾನಿಗಳ ಬಳಿ ಮನವಿ ಮಾಡಿ ದುಡುಕಿನ ನಿರ್ಧಾರ ಕೈಗೊಳ್ಳದಂತೆ ತಿಳಿಸಿದ್ರು. ಆದ್ರೂ ಕೂಡ ಅಭಿಮಾನಿಗಳ ಆತ್ಮಹತ್ಯೆ ಸರಣಿ ಮುಂದುವರೆದಿದೆ.

ತುಮಕೂರಿನಲ್ಲಿ ಮತ್ತೊಬ್ಬ ಅಪ್ಪು ಅಭಿಮಾನಿ ನೇಣಿಗೆ ಶರಣಾಗಿ ಮೃತಪಟ್ಟಿದ್ದಾರೆ. ಗಾರೆ ಕೆಲಸ ಮಾಡಿಕೊಂಡಿದ್ದ ಭರತ್ ಎಂಬ 30 ವರ್ಷದ ಅಪ್ಪು ಅಪ್ಪಟ ಅಭಿಮಾನಿಯು ಈ ಬಗ್ಗೆ ಸಾವಿಗೂ ಮುನ್ನ ಪತ್ರ ಬರೆದಿಟ್ಟಿದ್ದಾರೆ. ಪತ್ರದಲ್ಲಿ   ನಾನು ಅಪ್ಪುವಿನ ಅಭಿಮಾನಿ, ಅವರು ಇರುವ ಲೋಕಕ್ಕೆ ಹೋಗುತ್ತಿದ್ದೇನೆ. ಅವರಂತೆ ನಾನೂ ಕಣ್ಣು ದಾನ ಮಾಡಬೇಕು ಎಂದು ಪತ್ರದಲ್ಲಿ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭರತ್‌ನ ಪೋಷಕರು ಅವನ ಆಸೆಯಂತೆ ಕಣ್ಣುಗಳನ್ನು ದಾನ ಮಾಡಿದ್ದಾರೆ.

ಇನ್ನೂ ತುಮಕೂರಿನ ಹಿರೇಹಳ್ಳಿಯ ಮತ್ತೊಬ್ಬ ಅಪ್ಪು ಅಭಿಮಾನಿ ಕೂಡ  ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಶ್ರೀಅಪ್ಪು ಶ್ರೀನಿವಾಸ್ ಹೆಸರಿನ ಅಭಿಮಾನಿ ಸತತ ಎರಡು ದಿನ ಕಷ್ಟಪಟ್ಟು ಪುನೀತ್ ರಾಜ್‌ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದ. ಅಪ್ಪು ಅಂತ್ಯಕ್ರಿಯೆ ಬಳಿಕ ಮನೆಗೆ ವಾಪಸ್ಸಾಗಿದ್ದ ಶ್ರೀಅಪ್ಪು ಶ್ರೀನಿವಾಸ್ ಇಂದು ಹೃದಯಾಘಾತದಿಂದ ಸಾವನಪ್ಪಿದ್ದಾರೆ.  ಪುನೀತ್ ರಾಜ್‌ ಕುಮಾರ್ ಅವರು ನಿಧನವಾದ ದಿನವೇ ಏಳು ಮಂದಿ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡರು. ಒಬ್ಬ ಅಭಿಮಾನಿ ಹೃದಯಾಘಾತದಿಂದ ನಿಧನ ಹೊಂದಿದ್ದರು.

ವಿರಾಟ್ – ಅನುಷ್ಕಾರ 9 ತಿಂಗಳ ಮಗಳಿಗೆ ಅತ್ಯಾಚಾರ ಬೆದರಿಕೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd