ಕಬೋರ್ಡ್ ಮಧ್ಯೆ ಸುರಂಗ ಕೊರೆದು ವೇಶ್ಯಾವಾಟಿಕೆ..!
ತುಮಕೂರಿನ ಲಾಡ್ಜ್ ಒಂದರಲ್ಲಿ ಕಬೋರ್ಡ್ ಮಧ್ಯೆ ಸುರಂಗ ಕೊರೆದು ವೇಷ್ಯಾವಾಟಿಕೆ ನಡೆಸುತ್ತಿದ್ದ ರಹಸ್ಯ ಬಯಲಾಗಿದೆ. ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 9 ಆರೋಪಿಗಳನ್ನ ಬಂಧಿಸಿದ್ದಾರೆ. ತುಮಕೂರಿನಲ್ಲಿ ಲಾಡ್ಜ್ ನಲ್ಲಿ ಸುರಂಗ ಕೊರೆದು ವೇಶ್ಯಾವಾಟಿಕೆ ನಡೆಸಲಾಗ್ತಿತ್ತು. ಲಾಡ್ಜ್ ಮೇಲೆ ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ದಾಳಿ ವೇಳೆ ರೂಂ ಒಂದರಲ್ಲಿ ಸುರಂಗ ಪತ್ತೆಯಾಗಿದ್ದು, ಇಬ್ಬರು ಮಹಿಳೆಯರು ಓರ್ವ ಪಿಂಪ್ ಬಚ್ಚಿಟ್ಟಿಕೊಂಡಿರುವುದು ಬೆಳಕಿಗೆ ಬಂದಿದೆ. ಮೊನ್ನೆಯಷ್ಟೇ ಈ ಲಾಡ್ಜ್ ಸಮೀಪದ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ ಕಾಂಡೋಮ್ ಗಳು ಕಂಡು ಬಂದಿದ್ದವು. ವಿಷಯ ತಿಳಿದು ಒಡನಾಡಿ ಸಂಸ್ಥೆ ತನಿಖೆ ನಡೆಸಿ ಕ್ಯಾತ್ಸಂದ್ರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿತ್ತು. ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು 9 ಮಂದಿಯನ್ನ ಬಂಧಿಸಿದ್ದಾರೆ.