ಹೃದಯಾಘಾತದಿಂದಾಗಿ ತುಮಕೂರು ಡಿವೈಎಸ್ ಪಿ ಶಿವಕುಮಾರ್ ನಿಧನ
ತುಮಕೂರು ಜಿಲ್ಲೆಯ ಗುಪ್ತಚರ ವಿಭಾಗದಲ್ಲಿ ಡಿವೈಎಸ್ ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಕುಮಾರ್ ಅವರು ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೋಕಿನ ಮೂಲದವರಾದ ಇವರು ಕಳೆದ ಒಂದುವರೆ ವರ್ಷದಿಂದ ತುಮಕೂರು ಜಿಲ್ಲೆಯ ಗುಪ್ತಚರ ವಿಭಾಗದ ಡಿವೈಎಸ್ ಪಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ತಡರಾತ್ರಿ ತುಮಕೂರು ಜಿಲ್ಲೆಯ ಎಸ್ ಪಿ ಕಛೇರಿ ಹಿಂಬಾಗದ ಕ್ವಾರ್ಟರ್ಸ್ ನಲ್ಲಿ ಶಿವಕುಮಾರ್ ವಾಸವಾಗಿದ್ದರು. 1994 ರಲ್ಲಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದರು. ಪತ್ನಿ ವಿಜಯಲಕ್ಷಿ ಸೇರಿ ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರರನ್ನ ಅಗಲಿದ್ದಾರೆ.
Tumkur DYSP Shivkumar passes away