Tumkur | ಪಿಡಿಓ ಮೇಲೆ ಹಲ್ಲೆ ನಡೆಸಿದ ಗ್ರಾ.ಪಂ. ಮಾಜಿ ಅಧ್ಯಕ್ಷ
ತುಮಕೂರು : ರಸ್ತೆ ಬದಿಯ ಪೊದೆ ಕ್ಲೀನ್ ಮಾಡಿಸುವ ವಿಚಾರಕ್ಕೆ ಪಿಡಿಓ ಮೇಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಲ್ಲೆ ನಡೆಸಿರುವ ಘಟನೆ ತುಮಕೂರಿನ ಶಿರಾ ತಾಲೂಕಿನ ಗೋಪಾಲದೇವರಹಳ್ಳಿಯಲ್ಲಿ ನಡೆದಿದೆ.
ಪಿಡಿಓ ಶಿವಕುಮಾರ್ ಅವರ ಮೇಲೆ ಚಂದ್ರಣ್ಣ ಎಂಬುವವರು ಹಲ್ಲೆ ನಡೆಸಿದ್ದಾರೆ.
ಗ್ರಾಮ ಪಂಚಾಯಿತಿ ಕಚೇರಿಗೆ ನುಗ್ಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಚಂದ್ರಣ್ಣ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಈ ದೃಶ್ಯಾವಳಿಗಳನ್ನು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ರಸ್ತೆ ಬದಿಯಲ್ಲಿ ಪೊದೆ ಬೆಳೆದಿದೆ ಇದನ್ನ ಕ್ಲೀನ್ ಮಾಡಿಸಿ ಎಂದು ಚಂದ್ರಣ್ಣ ಹೇಳಿದ್ದು, ಈ ವಿಚಾರವನ್ನ ಗ್ರಾಮಸಭೆಯಲ್ಲಿ ಇಟ್ಟು ಸದಸ್ಯರ ಒಪ್ಪಿಗೆ ಪಡೆದು ಬಳಿಕ ಕ್ಲೀನ್ ಮಾಡಿಸುತ್ತೇನೆ ಎಂದು ಪಿಡಿಓ ಉತ್ತರ ಕೊಟ್ಟಿದ್ದಾರೆ.
ಇದರಿಂದ ಕೋಪಗೊಂಡ ಚಂದ್ರಣ್ಣ ಏಕಾಏಕಿ ಜಗಳ ತೆಗೆದು ಶಿವಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಂದ್ರಣ್ಣ ಅವರನ್ನ ಪೊಲೀಸರು ಬಂಧಿಸಿದ್ದಾರೆ.