Tumkur | ರಾತ್ರಿಯಿಡಿ ಭಾರಿ ಮಳೆ – ಕುಸಿದು ಬಿದ್ದ ಸೇತುವೆ
ತುಮಕೂರು : ಭಾರಿ ಮಳೆಗೆ ಕೊರಟಗೆರೆ ತಾಲೂಕಿನ ತಿತಾ ಜಲಾಶಯದ ಸಮೀಪ ಇರುವ ಸೇತುವೆ ಕುಸಿದು ಬಿದ್ದಿದೆ.
ನಿರಂತರವಾಗಿ ಸುರಿದ ಮಳೆಯಿಂದ ಸೇತುವೆ ಶಿಥಿಲಗೊಂಡಿತ್ತು. ಅಲ್ಲದೆ ಜಿಲ್ಲೆಯಲ್ಲಿ ರಾತ್ರಿ ಇಡೀ ನಿರಂತರವಾಗಿ ಭಾರಿ ಮಳೆ ಸುರಿದಿದೆ ಇದರಿಂದಾಗಿ ಇನ್ನಷ್ಟು ಶಿತಲಗೊಂಡು ಸೇತುವೆಯೇ ಬಿರುಕು ಬಿಟ್ಟು ಕುಸಿದು ಬಿದ್ದಿದೆ.
ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಕೊರಟಗೆರೆ ತಾಲೂಕಿನ ಗೊರವನಹಳ್ಳಿ, ತೀತಾ ಮಧ್ಯದ ರಸ್ತೆ ಸಂಚಾರ ಕಡಿತಗೊಂಡಿದೆ.
ಸೇತುವೆ ನಿರ್ಮಾಣ ಮಾಡಿ 8 ವರ್ಷಗಳಾಗಿದ್ದು ಕಾಮಗಾರಿಯನ್ನು ಕಳಪೆಯಾಗಿ ನಿರ್ವಹಿಸಿರುವುದು ರಿಂದ ರಸ್ತೆಯ ಸೇತುವೆ ಕುಸಿದು ಬಿದ್ದಿದೆ ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ.
ಇನ್ನು ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ರಸ್ತೆಯ ಸಂಚಾರ ಸಂಪೂರ್ಣ ಕಡಿತವಾಗಿದ್ದು, ಬಹುತೇಕ ಶಾಲಾ ಕಾಲೇಜು ಮಕ್ಕಳು, ನಿತ್ಯ ಕೆಲಸಕ್ಕೆ ಹೋಗುವವರು ಸಂಚಾರಕ್ಕೆ ಬೇರೆ ಮಾರ್ಗ ಹುಡುಕುತ್ತಿದ್ದಾರೆ.