Tumakuru: ಗ್ರಾಮಕ್ಕೆ ನೀರಿನ ಸೌಕರ್ಯ ಕೇಳಿದ ಯುವಕನಿಗೆ ಕಾಂಗ್ರೆಸ್ ಶಾಸಕರಿಂದ ಕಪಾಳ ಮೋಕ್ಷ
1 min read
ಗ್ರಾಮಕ್ಕೆ ನೀರಿನ ಸೌಕರ್ಯ ಕೇಳಿದ ಯುವಕನಿಗೆ ಕಾಂಗ್ರೆಸ್ ಶಾಸಕರಿಂದ ಕಪಾಳ ಮೋಕ್ಷ
ತಮಕೂರು: ಯುವಕನೋರ್ವ ತಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ಮತ್ತು ರಸ್ತೆ ಒದಗಿಸಬೇಕು ಎಂದು ಕೇಳಿದ್ದಕ್ಕೆ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ ಯವಕನಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಸಧ್ಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದ್ದು, ವಿಡಿಯೋದಲ್ಲಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಕಚೇರಿ ಬಳಿ ಯೋವಕನೋರ್ವ ತಮ್ಮ ಗ್ರಾಮಕ್ಕೆ ರಸ್ತೆ, ಕುಡಿಯವ ನೀರಿಲ್ಲವೆಂದು ಶಾಸಕ ವೆಂಕಟರಮಣಪ್ಪ ಅವರ ಬಳಿ ದೂರು ನೀಡಲು ಬಂದಿದ್ದಾನೆ.
ಬಳಿಕ ಯುವಕ ಶಾಸಕರ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ. ಆಗ ಶಾಸಕ ವೆಂಕಟರಮಪ್ಪ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಪೊಲೀಸ್ ಸ್ಟೇಷನ್ ಗೆ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಈ ದೃಶ್ಯವನ್ನು ಅಲ್ಲಿ ಸೇರಿದ್ದ ಜನರು ರೆಕಾರ್ಡ್ ಮಾಡಿಕೊಂಡಿದ್ದಾರೆ.
ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದ್ದು, ಜನರು ತೀರ್ವ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.