Tungabhadra | ಹರಿಯುವ ನೀರಿಗೆ ಕಲರ್ ಫುಲ್ ಟಚ್
ವಿಜಯನಗರ : ಮಲೆನಾಡಿನಲ್ಲಿ ನಿರಂತಾರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಹೊಸಪೇಟೆ ಬಳಿಯಿರುವ ತುಂಗಭದ್ರ ಜಲಾಶಯಕ್ಕೆ ಭಾರಿ ಪ್ರಮಾಣದ ಒಳ ಹರಿವು ಹೆಚ್ಚಾಗಿದೆ.
ಇದೀಗ ಜಲಾಶಯ ಭರ್ತಿಯಾಗಿದ್ದು ಜಲಾಶಯದಿಂದ ನದಿಗೆ ನೀರನ್ನ ಹರಿ ಬಿಡಲಾಗಿದೆ.
ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 1633 ಅಡಿಗಳಷ್ಟಾಗಿದ್ದು ಇದೀಗ 1631 ಅಡಿಗೆ ನೀರಿನ ಮಟ್ಟ ತಲುಪಿದೆ. ಅದಲ್ಲದೆ 93 ಸಾವಿರ್ ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಇನ್ನೂ ಹರಿದು ಬರುತ್ತಿದೆ.
ಇನ್ನು ಹೀಗೆ ಜಲಾಶದಿಂದ ಹರಿಯುವ ನೀರಿಗೆ ತುಂಗಭದ್ರ ಆಡಳಿತ ಮಂಡಳಿ ಕಲರ್ ಪುಲ್ ಟಚ್ ನೀಡುವ ಮೂಲಕ ಪ್ರವಾಸಿಗರನ್ನ ಆಕರ್ಸಿಸಲು ಮುಂದಾಗಿದೆ.

ಜಲಾಶಯಕ್ಕೆ 33 ಕ್ರಸ್ಟಗೇಟ್ಗಳಿದ್ದು ಪ್ರತಿಯೂಂದು ಕ್ರಷ್ಟ್ ಗೇಟ್ಗೆ ಬಣ್ಣ ಬಣ್ಣದ ದೀಪಗಳನ್ನ ಅಳವಡಿಸುವ ಮುಕಾಂತ್ರ ಕೃತಕ ಕಾಮನ ಬಿಲ್ಲನ್ನ ನಿರ್ಮಾಣ ಮಾಡಲಾಗಿದೆ.
ಸದ್ಯಕ್ಕೆ ತುಂಗಭದ್ರ ಜಲಾಶಯ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಇತ್ತ ಜಲಾಶಯದಿಂದ ತುಂಗಭದ್ರ ನದಿಗೆ ನೀರನ್ನ ಹರಿ ಬಿಟ್ಟ ಹಿನ್ನೆಲೆಯಲ್ಲಿ ನದಿ ಪಾತ್ರದ ವಿಶ್ವ ವಿಖ್ಯಾತ ಹಂಪಿಯ ಕೆಲವು ಸ್ಮಾರಕಗಳು ಮುಳುಗಡೆಯಾಗಿದೆ.
ಕೋದಂಡ ರಾಮಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಒನಕೆ ಕಿಂಡಿ ಮಾರ್ಗ ಸಂಪೂರ್ಣ ಬಂದಾಗಿದ್ದು ಚಕ್ರತೀರ್ಥದಲ್ಲಿರುವ ಕೋಟಿಲಿಂಗ, ಲಕ್ಷ್ಮೀ ದೇವಸ್ಥಾನ ಪುರಂದರ ಮಂಠಪ ಸೇರಿದಂತೆ ಇನ್ನೂ ಹಲವು ಸ್ಮಾರಕಗಳು ಮುಳುಗಡೆಯಾಗಿದೆ.
ಅದೇ ರೀತಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ಮತ್ತು ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆಯಾಗಿದ್ದು ರಸ್ತೆ ಸಂಚಾರ ಬಂದಾಗಿದೆ. ಅದರ ಜೊತೆ ಕಂಪ್ಲಿಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಕೂಡ ನೀರು ನುಗ್ಗಿದೆ.