ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗೆ ಟರ್ಕಿ ಸಂಚು – ಪಾಪಿ ಪಾಕ್ ಗೆ ಟರ್ಕಿ ಸಾಥ್..!
ಭಾರತದ ಬದ್ಧ ವೈರಿ ರಾಷ್ಟ್ರ ಅಂದ್ರೆ ಅದು ಪಾಕಿಸ್ತಾನ. ಪಾಕ್ ಗೆ ಕೆಲವೇ ಕೆಲವು ಮಿತ್ರ ರಾಷ್ಟ್ರಗಳಲ್ಲಿ ಒಂದು ಟರ್ಕಿ. ಇದೇ ಟರ್ಕಿ ರಾಷ್ಟ್ರ ಇದೀಗ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸುತ್ತಿದೆ. ಹಿಂಸಾಚಾರವನ್ನು ಹರಡಲು ಟರ್ಕಿಯ ಅಧ್ಯಕ್ಷ ರೆಚಪ್ ತಯ್ಯಿಪ್ ಎರ್ಡೊಗನ್ ತನ್ನ ಸೈನಿಕರನ್ನು ಕಾಶ್ಮೀರಕ್ಕೆ ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಗ್ರೀಕ್ ಮಾಧ್ಯಮವೊಂದು ವರದಿ ಮಾಡಿದೆ.
ಹೌದು ಟರ್ಕಿಯ ಬಾಡಿಗೆ ಸೈನಿಕರಾದ SADAT ಈಗ ಕಾಶ್ಮೀರದಲ್ಲಿ ಸಕ್ರಿಯವಾಗಲು ತಯಾರಿ ನಡೆಸುತ್ತಿದ್ದಾರೆ ಎಂದು ಪೆಂಟಾಪೋಸ್ಟಾಗ್ಮಾದ ವರದಿಯಲ್ಲಿ ಹೇಳಲಾಗಿದೆ. ಟರ್ಕಿ ತನ್ನನ್ನು ಮಧ್ಯ ಏಷ್ಯಾದ ಪ್ರಮುಖ ಶಕ್ತಿ ಎಂದು ತೋರಿಸಲು ಬಯಸಿದೆ. ಹಾಗಾಗಿ ಪಾಕಿಸ್ತಾನದ ಜೊತೆಗೆ ಕಾಶ್ಮೀರದಲ್ಲಿ ಹಿಂಸಾಚಾರವನ್ನು ಹರಡಲು ಸಂಚು ರೂಪಿಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗ್ತಿದೆ.
ಚೀನಾಗೆ ಒಂದಿಂಚೂ ಭೂಮಿಯನ್ನ ಬಿಟ್ಟುಕೊಟ್ಟಿಲ್ಲ: ರಕ್ಷಣಾ ಸಚಿವಾಲಯ..!
ಭಾರತದ ವಿರುದ್ಧ ಪಾಕಿಸ್ತಾನ ಕತ್ತಿ ಮಸೆಯುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಹಲವು ಪ್ರಯತ್ನಗಳನ್ನ ನಡೆಸಿ ಮುಖಭಂಗ ಅನುಭವಿಸಿದೆ. ಆದ್ರೆ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದ ಪಾಕಿಸ್ತಾನಕ್ಕೆ ಈಗ ಟರ್ಕಿ ಸಾಥ್ ನೀಡಿದ್ದು ಪ್ಲಾನ್ ರೂಪಿಸುತ್ತಿದೆ ಎಂದು ಹೇಳಲಾಗ್ತಿದೆ.
ಕಾಶ್ಮೀರ ವಿರುದ್ಧ ಸಂಚು ರೂಪಿಸಲು ಭಯೋತ್ಪಾದಕ ಫೈ, ಅಮೆರಿಕಾದಲ್ಲಿ, ಅಮೆರಿಕನ್ ಕೌನ್ಸಿಲ್ ಆಫ್ ಕಾಶ್ಮೀರವನ್ನು ಸ್ಥಾಪಿಸಿದ್ದ. ಈ ಸಂಸ್ಥೆಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಹಣ ನೀಡಿದೆ. ಈ ಸಂಸ್ಥೆ ಈಗ ಕಾಶ್ಮೀರದಲ್ಲಿ ಟರ್ಕಿಯ ಸದತ್ ಮತ್ತು ಇಸ್ಲಾಮಿಕ್ ವರ್ಲ್ಡ್ ಎಂಬ ಎನ್ಜಿಒ ಸಹಯೋಗದೊಂದಿಗೆ ಸಂಚು ರೂಪಿಸುತ್ತಿದೆ.
ಫೆಬ್ರವರಿ 15ರಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ : ಇಲ್ಲದಿದ್ದರೆ 2 ಪಟ್ಟು ದಂಡ ಕಟ್ಟಲು ರೆಡಿಯಾಗಿ..!
ಜಿಹಾದಿಗಳಿಗೆ ತರಬೇತಿ ನೀಡಲು ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸಲು ಟರ್ಕಿ, ಸಿರಿಯಾ, ಲಿಬಿಯಾ ಸೇರಿದಂತೆ ಅನೇಕ ದೇಶಗಳಲ್ಲಿ ಕೆಲಸ ಮಾಡುವ ಬಾಡಿಗೆ ಸೈನಿಕರ ಗುಂಪನ್ನು SADAT ಎಂದು ಕರೆಯಲಾಗುತ್ತದೆ. ಮುಸ್ಲಿಂ ದೇಶಗಳ ಸಾವಿರಾರು ಹೋರಾಟಗಾರರನ್ನು ಒಟ್ಟುಗೂಡಿಸಿ ಇಸ್ಲಾಮಿಕ್ ಸೈನ್ಯವನ್ನು ರಚಿಸಲು SADAT ಪ್ರಯತ್ನಿಸುತ್ತಿದೆ.
ಟರ್ಕಿಯ ಅಧ್ಯಕ್ಷ ರೆಚಪ್ ತಯ್ಯಿಪ್ ಎರ್ಡೊಗನ್, ಮಿಷನ್ ಕಾಶ್ಮೀರದ ಜವಾಬ್ದಾರಿಯನ್ನು SADATಗೆ ಹಸ್ತಾಂತರಿಸಿದ್ದಾರೆ. SADAT ನೇತೃತ್ವವನ್ನು ಎರ್ಡೊ ಅವರ ಮಿಲಿಟರಿ ಸಲಹೆಗಾರ ಅಡ್ನಾನ್ ತನ್ರೆವರ್ಡಿ ವಹಿಸಿದ್ದಾರೆ. ಅವರು ಕಾಶ್ಮೀರ ಮೂಲದ ಭಯೋತ್ಪಾದಕ ಸೈಯದ್ ಗುಲಾಮ್ ನಬಿ ಫೈ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗ್ತಿದೆ.
Whaaaat…! ಇಲ್ಲಿ ಗರ್ಲ್ ಫ್ರೆಂಡ್ಸ್ ಬಾಡಿಗೆಗೆ ಸಿಗ್ತಾರಾ..! : ಚೀನಾದ INTRESTING FACTS..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








