ಚೀನಾಗೆ ಒಂದಿಂಚೂ ಭೂಮಿಯನ್ನ ಬಿಟ್ಟುಕೊಟ್ಟಿಲ್ಲ: ರಕ್ಷಣಾ ಸಚಿವಾಲಯ..!
ನವದೆಹಲಿ : ಪೂರ್ವ ಲಡಾಖ್ ನ ಪ್ಯಾಂಗಾಂಗ್ ತ್ಸೊ ಸರೋವರದ ಪ್ರದೇಶದಲ್ಲಿನ ಸೇನಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಸಂಬಂಧ ಚೀನಾದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದ್ರೆ ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಭಾರತದ ಭೂ ಭಾಗವನ್ನ ಚೀನಾ ವಶಕ್ಕೆ ಪಡೆದಿದೆ ಎಂದು ವದಂತಿಗಳು ಹಬ್ಬುತ್ತಿದೆ. ಆದ್ರೆ ಇದಕ್ಕೆ ರಕ್ಷನಾ ಸಚಿವಾಲಯವು ಸ್ಪಷ್ಟನೆ ನೀಡಿದೆ. ಒಪ್ಪಂದದ ಫಲವಾಗಿ ಯಾವುದೇ ಭೂಭಾಗವನ್ನು ಬಿಟ್ಟುಕೊಟ್ಟಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಫೆಬ್ರವರಿ 15ರಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ : ಇಲ್ಲದಿದ್ದರೆ 2 ಪಟ್ಟು ದಂಡ ಕಟ್ಟಲು ರೆಡಿಯಾಗಿ..!
ಭಾರತವು ಚೀನಾಕ್ಕೆ ತನ್ನ ಭೂ ಪ್ರದೇಶವನ್ನು ಬಿಟ್ಟುಕೊಟ್ಟಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ನಲ್ಲಿ ಆರೋಪಿಸಿದ ಬಳಿಕ ರಕ್ಷಣಾ ಸಚಿವಾಲಯವು ಈ ಬಗ್ಗೆ ಸ್ಪಷ್ಟನೆ ನೀಡಿದೆ. ಅಲ್ಲದೇ ಪೂರ್ವ ಲಡಾಖ್ ನಲ್ಲಿ ದೇಶದ ರಾಷ್ಟ್ರೀಯ ಹಿತಾಸಕ್ತಿ ಮತ್ತು ಭೂಪ್ರದೇಶವನ್ನು ಪರಿಣಾಮಕಾರಿಯಾಗಿ ಕಾಪಾಡುವ ಕ್ರಮ ತೆಗೆದುಕೊಳ್ಳಲಾಗಿದೆ. ಏಕೆಂದರೆ ಸರ್ಕಾರವು ಸಶಸ್ತ್ರ ಪಡೆಗಳ ಸಾಮರ್ಥ್ಯದ ಮೇಲೆ ಪೂರ್ತಿ ನಂಬಿಕೆ ಇರಿಸಿದೆ ಎಂದು ತಿಳಿಸಿದೆ.
ಸ್ಮೃತಿ ಮಂ`ಧನ’ ಬಿಸಿನೆಸ್ ಬೌಂಡರಿ | ಈ ತಲೆಮಾರಿನ ಹುಡುಗಿಯರಿಗೆ ಸ್ಫೂರ್ತಿ.. ಸ್ಮೃತಿ?
ಅಲ್ಲದೇ ಭಾರತದ ಭೂಪ್ರದೇಶವು ಫಿಂಗರ್ 4ರವರೆಗೂ ಇದೆ ಎನ್ನುವ ಪ್ರತಿಪಾದನೆಯು ಖಂಡಿತವಾಗಿಯೂ ಸುಳ್ಳು. 1962ರಿಂದ ಚೀನಾವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ 43,000 ಚದರ ಕಿಮೀಗೂ ಅಧಿಕ ಪ್ರದೇಶ ಸೇರಿದಂತೆ ಭಾರತದ ಭೂಪಟದಲ್ಲಿ ಚಿತ್ರಿಸಿರುವ ಹಾಗೆ ಭಾರತದ ಭೂಪ್ರದೇಶವಿದೆ. ವಾಸ್ತವ ನಿಯಂತ್ರಣ ರೇಖೆಯಲ್ಲಿ ಕೂಡ ಭಾರತದ ಗ್ರಹಿಕೆಯಂತೆ ಇರುವುದು ಫಿಂಗರ್ 8ರಲ್ಲಿಯೇ ವಿನಾ ಫಿಂಗರ್ 4 ಅಲ್ಲ. ಈ ಕಾರಣದಿಂದಾಗಿಯೇ ಭಾರತವು ಚೀನಾದೊಂದಿಗಿನ ಈಗಿನ ಒಪ್ಪಂದ ಸೇರಿದಂತೆ ಫಿಂಗರ್ 8ರವರೆಗೂ ಗಸ್ತು ತಿರುಗುವ ಹಕ್ಕನ್ನು ದೃಢವಾಗಿ ಪ್ರತಿಪಾದಿಸಿದೆ ಎಂದು ತಿಳಿಸಿದೆ.
Whaaaat…! ಇಲ್ಲಿ ಗರ್ಲ್ ಫ್ರೆಂಡ್ಸ್ ಬಾಡಿಗೆಗೆ ಸಿಗ್ತಾರಾ..! : ಚೀನಾದ INTRESTING FACTS..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








