TVS Motor – ಒಂದೇ ಚಾರ್ಜ್ ಗೆ 140 km ಮೈಲೇಜ್ ಕೊಡುವ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ..
TVS Motor Company ಹೊಸದಾಗಿ ಮೂರು ಮಾದರಿಗಳಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ಇದು ಒಂದೇ ಚಾರ್ಜ್‌ನಲ್ಲಿ 140 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ.
ಐಕ್ಯೂಬ್, ಐಕ್ಯೂಬ್ ಎಸ್ ಮತ್ತು ಐಕ್ಯೂಬ್ ಎಸ್ ಟಿ ಎಂ ಎಂಬ ಮೂರು ರೂಪಾಂತರಗಳಲ್ಲಿ TVS ಎಲೆಕ್ಟ್ರಿಕ್ ಸ್ಕೂಟಿಗಳು ಬಿಡುಗಡೆಯಾಗುತ್ತಿವೆ.
ದೆಹಲಿ ಶೋ ರೂಮ್ ಪ್ರಕಾರ ಟಿವಿಎಸ್ ಐಕ್ಯೂಬ್ ನ ಬೆಲೆ ರೂ 98,564 ಮತ್ತು ಟಿವಿಎಸ್ ಐಕ್ಯೂಬ್ S ನ ಬೆಲೆ ರೂ. 1,08,690 ಬೆಲೆ ನಿಗದಿ ಪಡಿಸಲಾಗಿದೆ. ಆದರೆ ಎಸ್ ಟಿ ಆವೃತ್ತಿಯ ಬೆಲೆಯನ್ನ ಕಂಪನಿ ಇನ್ನೂ ನಿಗದಿಪಡಿಸಿಲ್ಲ. ಕೇವಲ ಮುಂಗಡ ಬುಕ್ಕಿಂಗ್ ಮಾತ್ರ ತೆರೆಯಲಾಗಿದೆ,
ಟಿವಿಎಸ್ ಐಕ್ಯೂಬ್ ಸರಣಿಯು 11 ಕಲರ್ ಮತ್ತು 3 ಚಾರ್ಜಿಂಗ್ ಆಯ್ಕೆಗಳ ಅವಕಾಶದಲ್ಲಿ ದೊರೆಯಲಿದೆ.
ಟಿವಿಎಸ್ ಐಕ್ಯೂಬ್ ನ 2022 ಆವೃತ್ತಿಯ ಬೇಸ್ ಮಾಡೆಲ್ ಎಸ್ ಒಂದೇ ಚಾರ್ಜ್‌ನಲ್ಲಿ 100 ಕಿಮೀ ವರೆಗೆ ಓಡಬಹುದು, ಆದರೆ ಅದರ ಉನ್ನತ ಮಾದರಿ ಎಸ್ ಟಿ ಪೂರ್ಣ ಚಾರ್ಜ್‌ನಲ್ಲಿ 140 ಕಿಮೀ ವರೆಗೆ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ