ಅತ್ಯಾಕರ್ಷಕ ರೋನಿನ್ ಬೈಕ್ ಬಿಡುಗಡೆ ಮಾಡಿದ TVS ಕಂಪನಿ…
ದೇಶದ ಪ್ರಮುಖ ದ್ವಿಚಕ್ರ ವಾಹನ ತಾಯಾರಿಕಾ ಸಂಸ್ಥೆ ಟಿವಿಎಸ್ ತನ್ನ ಹೊಸ ಮಾಡೆಲ್ ಬೈಕ್ ನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ. TVS ಹೊಸ ಬೈಕ್‌ಗೆ ರೋನಿನ್ ಎಂದು ಹೆಸರಿಡಲಾಗಿದೆ. ರೋನಿನ್ ಟಿವಿಎಸ್ ನಿಂದ ಹೊರಬರುತ್ತಿರುವ ರೆಟ್ರೋ ಮತ್ತು ಆಧುನಿಕ ಶೈಲಿಯ ಮೊದಲ ನಿಯೋ-ರೆಟ್ರೋ ರೋಡ್‌ಸ್ಟರ್ ಬೈಕ್ ಆಗಿದೆ. ಇದನ್ನ ಭಾರತದಲ್ಲಿ ಮೂರು ವಿಧಗಳಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಬೈಕ್ ನ ಆರಂಭಿಕ ಬೆಲೆ ರೂ 1.49 ಲಕ್ಷ (ಎಕ್ಸ್ ಶೋ ರೂಂ,) ಹೊಸ ಟಿವಿಎಸ್ ರೋನಿನ್ ಮೂರು ವಿಧಗಳಲ್ಲಿ ಲಭ್ಯವಿದೆ – ಬೇಸ್ (ರೂ. 1.49 ಲಕ್ಷ), ಬೇಸ್ ಪ್ಲಸ್ (ರೂ. 1.56 ಲಕ್ಷ) ಮತ್ತು ಮಿಡ್ (ರೂ. 1.69-1.71 ಲಕ್ಷ).

ಹೊಸ ಟಿವಿಎಸ್ ರೋನಿನ್ ವಿನ್ಯಾಸದಲ್ಲಿ ರೆಟ್ರೊ-ಶೈಲಿಯ, ಸ್ಕ್ರಾಂಬ್ಲರ್-ಕಮ್- ಕೆಫೆ ರೇಸರ್ ಬೈಕ್ ಆಕಾರವನ್ನ ಹೊಂದಿದೆ. ಈ ಮಾದರಿಯಲ್ಲಿ ಟಿವಿಎಸ್‌ನ ಮೊದಲ ಬೈಕ್ ಆಗಿದ್ದು, ಇದು 225.9CC ಸಿಂಗಲ್ ಎಂಜಿನ್ ಮತ್ತು ಹೊಸ ಸ್ಪ್ಲಿಟ್ ಡ್ಯುಯಲ್ ಕ್ರೇಡಲ್ ಫ್ರೇಮ್‌ನೊಂದಿಗೆ ಬರಲಿದೆ.
TVS ರೋನಿನ್: ಎಂಜಿನ್ ಮತ್ತು ಗೇರ್ ಬಾಕ್ಸ್
ಹೊಸ TVS ರೋನಿನ್ 225.9cc, ಬೈಕ್ 4-ವಾಲ್ವ್, ಸಿಂಗಲ್-ಸಿಲಿಂಡರ್ ಎಂಜಿನ್. 7750rpm ನಲ್ಲಿ 20.4hp ಮತ್ತು 3750rpm ನಲ್ಲಿ 19.93Nm ಶಕ್ತಿಯನ್ನ ಹೊರಹಾಕುತ್ತದೆ. , ರೊನಿನ್ 5-ಸ್ಪೀಡ್ ಗೇರ್ ಬಾಕ್ಸ್ ಗಳೊಂದಿಗೆ ಬರಲಿದೆ.
TVS ನ ರೋನಿನ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ Bajaj Pulsar 250, Dominar 250, Royal Enfield Hunter 350, Royal Enfield Himalayan Scream 411 ಮತ್ತು Yezdi Scrambler ನಂತಹ ಬೈಕ್‌ಗಳಿಗೆ ಪೈಪೋಟಿ ನೀಡಲಿದೆ.