ಕ್ರಿಸ್ ಗೇಲ್ ಅವರನ್ನು ಯುನಿವರ್ಸಲ್ ಬಾಸ್ ಅಂತ ಕರೆಯುವುದು ಯಾಕೆ ?
ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ತೆಂಡುಲ್ಕರ್ ಅವರನ್ನು ಕ್ರಿಕೆಟ್ ದೇವ್ರು ಅಂತ ಕರೆಯುತ್ತಾರೆ.
ಸೌರವ್ ಗಂಗೂಲಿಯವರನ್ನು ಗಾಡ್ ಆಫ್ ಆಫ್ ಸೈಡ್ ಅನ್ನುತ್ತಾರೆ.
ರಾಹುಲ್ ದ್ರಾವಿಡ್ ಅವರನ್ನು ಕ್ರಿಕೆಟ್ ಜಗತ್ತಿನ ಬುದ್ಧ ಎಂದು ಹೇಳುತ್ತಾರೆ.
ಮಹೇಂದ್ರ ಸಿಂಗ್ ಧೋನಿಯವರನ್ನು ಕೂಲ್ ಕ್ಯಾಪ್ಟನ್ ಅನ್ನುತ್ತಾರೆ.
ವಿರಾಟ್ ಕೊಹ್ಲಿಯವರನ್ನು ಕ್ರಿಕೆಟ್ ಜಗತ್ತಿನಲ್ಲಿ ಚೇಸಿಂಗ್ ಗಾಡ್ ಅಂತಾರೆ..
ಆದ್ರೆ ಕ್ರಿಸ್ ಗೇಲ್ ಅವರನ್ನು ಯುನಿವರ್ಸಲ್ ಬಾಸ್ ಎಂದು ಕರೆಯುತ್ತಾರೆ.
ಹೌದು, ವೆಸ್ಟ್ ಇಂಡೀಸ್ ನ ದೈತ್ಯ ಆಟಗಾರ ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಮಾಡಿರುವ ಕಿತಾಪತಿ ಅಷ್ಟಿಷ್ಟಲ್ಲ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನಲ್ಲಿ ಸಾಧಾರಣ ಮಟ್ಟದ ಪ್ರದರ್ಶನ ನೀಡಿರುವ ಕ್ರಿಸ್ ಗೇಲ್ ಚುಟುಕು ಕ್ರಿಕೆಟ್ ನಲ್ಲಿ ಮಾಡಿರುವ ಸಾಧನೆ ಮಾತ್ರ ಅಷ್ಟಿಷ್ಟಲ್ಲ.
ವೆಸ್ಟ್ ಇಂಡೀಸ್ ತಂಡದ ಆಟಗಾರನಾಗಿದ್ರೂ ಕ್ರಿಸ್ ಗೇಲ್ ಸದ್ದು ಮಾಡಿದ್ದು ಟಿ-ಟ್ವೆಂಟಿ ಲೀಗ್ ಟೂರ್ನಿಗಳಲ್ಲಿ.
ಸುಮಾರು 20ಕ್ಕೂ ಹೆಚ್ಚು ಫ್ರಾಂಚೈಸಿಗಳ ಪರ ಆಡಿರುವ ಕ್ರಿಸ್ ಗೇಲ್ ಟಿ-ಟ್ವಿಂಟಿ ಕ್ರಿಕೆಟ್ ನ ಅಸುರ.
ಹೌದು, ಕ್ರಿಸ್ ಗೇಲ್ ಕ್ರಿಸ್ ನಲ್ಲಿದ್ರೆ ಬೌಲರ್‍ಗಳ ಎದೆಬಡಿತ ಕೂಡ ಜೋರಾಗಿರುತ್ತೆ.
ಬ್ಯಾಟ್ ಅನ್ನು ಗದೆಯಂತೆ ಹಿಡಿದುಕೊಂಡು ಆರ್ಭಟಿಸಲು ಶುರು ಮಾಡಿದ್ರೆ ಗೇಲ್ ಅವರನ್ನು ತಡೆಯುವುದು ತುಂಬಾನೇ ಕಷ್ಟ ಕಷ್ಟ..
ಕ್ರಿಸ್ ಗೇಲ್
ಸಿಕ್ಸರ್ ಬೌಂಡರಿಗಳ ಸುರಿಮಳೆಗೈಯುವ ಕ್ರಿಸ್ ಗೇಲ್ ಆಟ ಪಕ್ಕಾ ಅದು ಹೊಡಿಬಡಿ ಆಟ. ಬ್ಯಾಟ್ ಇರೋದೇ ಹೊಡೆಯೋಕೆ. ಚೆಂಡು ಇರೋದು ದಂಡಿಸೋಕೆ ಅನ್ನೋ ಮಂತ್ರಪಠಿಸಿಕೊಂಡು ಕ್ರಿಸ್ ಗೇಲ್ ಬ್ಯಾಟಿಂಗ್ ಮಾಡುತ್ತಾರೆ.
ಅಂದ ಹಾಗೇ ಕ್ರಿಸ್ ಗೇಲ್ ಅವರು ಇಲ್ಲಿಯವರೆಗೆ 405 ಪಂದ್ಯಗಳನ್ನು ಆಡಿದ್ದಾರೆ. 397 ಇನಿಂಗ್ಸ್ ಗಳಲ್ಲಿ ಕ್ರಿಸ್ ಗೇಲ್ ದಾಖಲಿಸಿದ್ದ ರನ್ ಬರೋಬ್ಬರಿ 13,349.
ಇದ್ರಲ್ಲಿ 22 ಶತಕಗಳು ಹಾಗೂ 83 ಅರ್ಧಶತಕಗಳಿವೆ. 9093 ಎಸೆತಗಳನ್ನು ಎದುರಿಸಿದ್ದ ಕ್ರಿಸ್ ಗೇಲ್ 983 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. 1027 ಬೌಂಡರಿಗಳನ್ನು ದಾಖಲಿಸಿದ್ದಾರೆ. ಅಜೇಯ 175 ರನ್ ಚುಟುಕು ಕ್ರಿಕೆಟ್ ನಲ್ಲಿ ದಾಖಲಿಸಿದ್ದ ಗರಿಷ್ಠ ರನ್. 27 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.
ಕಿರಾನ್ ಪೊಲಾರ್ಡ್
ಕಿರಾನ್ ಪೊಲಾರ್ಡ್. ವೆಸ್ಟ್ ಇಂಡೀಸ್ ಕ್ರಿಕೆಟ್ ನ ಮತ್ತೊಬ್ಬ ದೈತ್ಯ ಆಟಗಾರ.
ಆಲ್ ರೌಂಡರ್ ಆಗಿರುವ ಕಿರಾನ್ ಪೊಲಾರ್ಡ್ ಕೂಡ ಸುಮಾರು ಹದಿನೈದು ಫ್ರಾಂಚೈಸಿಗಳ ಪರ ಆಡಿದ್ದಾರೆ. ಇಲ್ಲಿಯವರೆಗೆ 519 ಚುಟುಕು ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ.
463 ಇನಿಂಗ್ಸ್ ಗಳನ್ನು ಆಡಿರುವ ಪೊಲಾರ್ಡ್ 10381 ರನ್ ದಾಖಲಿಸಿದ್ದಾರೆ. ಇದ್ರಲ್ಲಿ ಒಂದು ಶತಕ ಹಾಗೂ 51 ಅರ್ಧಶತಕಗಳಿವೆ. 18 ಬಾರಿ ಸೊನ್ನೆಗೆ ಔಟಾಗಿದ್ದಾರೆ. ಒಟ್ಟು 6834 ಎಸೆತಗಳನ್ನು ಎದುರಿಸಿರುವ ಪೊಲಾರ್ಡ್, 685 ಸಿಕ್ಸರ್ ಹಾಗೂ 665 ಬೌಂಡರಿಗಳನ್ನು ಸಿಡಿಸಿದ್ದಾರೆ.
ಶೋಯಿಬ್ ಮಲ್ಲಿಕ್
ಇನ್ನು ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಪಾಕಿಸ್ತಾನದ ಶೋಯಿಬ್ ಮಲ್ಲಿಕ್ ಅವರು ಗರಿಷ್ಠ ರನ್ ದಾಖಲಿಸಿದ್ದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಶೋಯಿಬ್ ಮಲ್ಲಿಕ್ 398 ಪಂದ್ಯಗಳನ್ನು ಆಡಿದ್ದಾರೆ. 371 ಇನಿಂಗ್ಸ್ ಗಳಲ್ಲಿ ಕಲೆ ಹಾಕಿರುವ ಒಟ್ಟು ರನ್ 10077. ಇದ್ರಲ್ಲಿ 62 ಅರ್ಧಶತಕಗಳಿವೆ. ಶತಕ ದಾಖಲಿಸಲು ಸಾಧ್ಯವಾಗಿಲ್ಲ. 14 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. 8021 ಎಸೆತಗಳನ್ನು ಎದುರಿಸಿರುವ ಶೋಯಿಬ್ ಮಲ್ಲಿಕ್ 790 ಬೌಂಡರಿ ಮತ್ತು 299 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.
ಬ್ರೆಂಡನ್ ಮೆಕಲಮ್.
ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಮ್ ಅವರು 370 ಚುಟುಕು ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. 364 ಇನಿಂಗ್ಸ್ ಗಳಲ್ಲಿ 9922 ರನ್ ಪೇರಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 8021 ಎಸೆತಗಳನ್ನು ಎದುರಿಸಿರುವ ಮೆಕಲಮ್ ಅವರು 485 ಸಿಕ್ಸರ್ ಹಾಗೂ 924 ಬೌಂಡರಿಗಳನ್ನು ದಾಖಲಿಸಿದ್ದಾರೆ. 62 ಅರ್ಧಶತಕಗಳು ಹಾಗೂ 14 ಬಾರಿ ಶೂನ್ಯ ಸುತ್ತಿದ್ದಾರೆ.
ಡೇವಿಡ್ ವಾರ್ನರ್
ಆಸ್ಟ್ರೇಲಿಯಾದ ಹೊಡಿಬಡಿ ಆಟಗಾರ. ಒಟ್ಟು ಆಡಿರುವ ಪಂದ್ಯಗಳು 290. 289 ಇನಿಂಗ್ಸ್ ಗಳಲ್ಲಿ 9560 ರನ್ ಪೇರಿಸಿದ್ದಾರೆ. 6765 ಎಸೆತಗಳನ್ನು ಎದುರಿಸಿರುವ ಡೇವಿಡ್ ವಾರ್ನರ್, 367 ಸಿಕ್ಸರ್ ಹಾಗೂ 928 ಬೌಂಡರಿಗಳನ್ನು ಸಿಡಿಸಿದ್ದಾರೆ. ಎಂಟು ಶತಕ ಹಾಗೂ 28 ಅರ್ಧಶತಕಗಳನ್ನು ಸಿಡಿಸಿದ್ದಾರೆ. 18 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.
ಇನ್ನುಳಿದಂತೆ ಆರೋನ್ ಫಿಂಚ್ ಆರನೇ ಸ್ಥಾನದಲ್ಲಿದ್ರೆ, ವಿರಾಟ್ ಕೊಹ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಎಬಿಡಿ ವಿಲಿಯರ್ಸ್ ಎಂಟು ಮತ್ತು ರೋಹಿತ್ ಶರ್ಮಾ 9ನೇ ಸ್ಥಾನ ಹಾಗೂ ಶೇನ್ ವಾಟ್ಸನ್ 10ನೇ ಸ್ಥಾನದಲ್ಲಿದ್ದಾರೆ. ಸುರೇಶ್ ರೈನಾ 11ನೇ ಸ್ಥಾನದಲ್ಲಿದ್ದಾರೆ.
ಇಲ್ಲಿ ಟೀಮ್ ಇಂಡಿಯಾ ಆಟಗಾರರು ಕೇವಲ ಭಾರತೀಯ ದೇಸಿ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. ವಿದೇಶಿ ಲೀಗ್ ಟೂರ್ನಿಯಲ್ಲಿ ಆಡುತ್ತಿಲ್ಲ.
ಒಟ್ಟಿನಲ್ಲಿ ಚುಟುಕು ಕ್ರಿಕೆಟ್ ನಲ್ಲಿ ಕ್ರಿಸ್ ಗೇಲ್ ಮತ್ತು ಕಿರಾನ್ ಪೊಲಾರ್ಡ್ ಅದ್ಭುತ ಆಟವನ್ನೇ ಆಡಿದ್ದಾರೆ.