Twin sisters Marriage: ಒಬ್ಬನೇ ವರನನ್ನ ವರಿಸಿದ ಅವಳಿ ಸಹೋದರಿಯರು…
ಮಹಾರಾಷ್ಟ್ರದ ಸೊಲ್ಲಾಪುರದ ಜಿಲ್ಲೆಯುಲ್ಲಿ ನಡೆದ ಮದುವೆಯಲ್ಲಿ ಮುಂಬೈ ಮೂಲದ ಅವಳಿ ಸಹೋದರಿಯರು ಒಬ್ಬನೇ ವರನನ್ನ ವರಿಸಿರುವ ಘಟನೆ ನಡೆದಿದೆ. ಮಲ್ಶಿರಸ್ ತಹಸಿಲ್ನಲ್ಲಿ ನಡೆದ ಮದುವೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ದೂರಿನ ಆಧಾರದ ಮೇಲೆ, ಅಕ್ಲುಜ್ ಪೊಲೀಸ್ ಠಾಣೆಯಲ್ಲಿ ವರನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 494 (ಸಂಗಾತಿಯ ಜೀವಿತಾವಧಿಯಲ್ಲಿ ಮತ್ತೆ ಮದುವೆಯಾಗುವುದು) ಅಡಿಯಲ್ಲಿ ಗುರುತಿಸಲಾಗದ (ಎನ್ಸಿ) ಅಪರಾಧವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Two sisters, both IT professionals, from Mumbai marry same man from Akluj village in Solapur, Maharashtra. pic.twitter.com/xsTAaGhNAt
— Love (@LocalBabaji) December 4, 2022
ಮರಾಠಿ ಮಾಧ್ಯಮಗಳ ವರದಿ ಪ್ರಕಾರ, ವರ ಅತುಲ್ ಮಲ್ಶಿರಾಸ್ ತಾಲೂಕಿನ ನಿವಾಸಿಯಾಗಿದ್ದು, ಮುಂಬೈನಲ್ಲಿ ಟ್ರಾವೆಲ್ ಏಜೆನ್ಸಿ ವ್ಯವಹಾರವನ್ನು ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ತಂದೆ ತೀರಿಕೊಂಡ ನಂತರ ಬಾಲಕಿಯರು ತಾಯಿಯೊಂದಿಗೆ ವಾಸವಾಗಿದ್ದರು. ಒಮ್ಮೆ ರಿಂಕಿ ಮತ್ತು ಪಿಂಕಿಯ ತಾಯಿ ಅನಾರೋಗ್ಯಕ್ಕೆ ಒಳಗಾದಾಗ, ಅತುಲ್ ಅವರನ್ನ ತನ್ನ ಕಾರಿನಲ್ಲಿ ಆಸ್ಪತ್ರೆಗೆ ಸೇರಿಸಿದಾಗ ಅವಳಿ ಸಹೋದರಿಯರ ಪರಿಚಯವಾಗಿದೆ.
ಮದುವೆಗೆ ಎರಡೂ ಕುಟುಂಬದವರು ಒಪ್ಪಿಗೆ ಸೂಚಿಸಿದ್ದು, ಯಾವುದೇ ಆಕ್ಷೇಪಣೆ ಅಥವಾ ಬಲವಂತದ ನಿರ್ಧಾರದ ಬಗ್ಗೆ ಕುಟುಂಬ ಸದಸ್ಯರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
Twin sisters Marriage: Twin sisters from Maharashtra marry same man in bizarre wedding.