ಖಾತೆಗಳ ಕುರಿತು ಮಾಹಿತಿ ಕೋರಿ ಅತೀ ಹೆಚ್ಚು ಕೋರಿಕೆಗಳು ಬಂದಿರುವುದು ಭಾರತದಿಂದಲೇ: ಟ್ವಿಟರ್
ನವದೆಹಲಿ : ಜುಲೈ 2020ರಿಂದ ಡಿಸೆಂಬರ್ 2020ರ ನಡುವಿನ ಪಾರದರ್ಶಕತೆ ವರದಿಯಲ್ಲಿ ಟ್ವಿಟ್ಟರ್ ಭಾರತದಿಂದ ಬಂದ ಮಾಹಿತಿಗಳ ಕುರಿತಾದ ಮಹತ್ವದ ವಿಚಾರ ಬಹಿರಂಗ ಪಡಿಸಿದೆ. ಖಾತೆಗಳ ಕುರಿತು ಮಾಹಿತಿ ಕೋರಿ ಟ್ವಿಟರ್ ಗೆ ಗರಿಷ್ಠ ಕೋರಿಕೆಗಳು ಭಾರತದಿಂದ ಬಂದಿವೆ ಎಂದು ಟ್ವಿಟರ್ ತಿಳಿಸಿದೆ.
ಈ ವರದಿ 2012ರಿಂದ ಪ್ರಕಟವಾಗುತ್ತಿದ್ದು, ಇದೇ ಮೊದಲ ಬಾರಿಗೆ ಪಟ್ಟಿಯ ಮೊದಲ ಸ್ಥಾನದಲ್ಲಿ ಅಮೆರಿಕಾದ ಹೆಸರಿಲ್ಲ ಎಂದು ಟ್ವಿಟರ್ ಹೇಳಿದೆ. ಖಾತೆಗಳ ಕುರಿತು ಮಾಹಿತಿ ಕೋರಿ ಸಲ್ಲಿಸಲಾದ ಗರಿಷ್ಠ ಅಪೀಲುಗಳ ವಿಚಾರದಲ್ಲಿ ಭಾರತ ಹಾಗೂ ಅಮೆರಿಕಾದ ನಂತರದ ಸ್ಥಾನಗಳಲ್ಲಿ ಜಪಾನ್ (17%) ಮತ್ತು ಫ್ರಾನ್ಸ್ (14%) ಇವೆ.
ಜಾಗತಿಕವಾಗಿ ಖಾತೆಗಳ ಕುರಿ ತು ಮಾಹಿತಿ ಕೋರಿ ಸಲ್ಲಿಸಲಾದ ಮನವಿಗಳ ಪೈಕಿ ಭಾರತ ಸರಕಾರದಿಂದ ಬಂದ ಮನವಿಗಳು ಶೇ.25ರಷ್ಟಿವೆ ಎಂದು ವರದಿ ಹೇಳಿದೆ. ನಂತರದ ಸ್ಥಾನದಲ್ಲಿರುವ ಅಮೆರಿಕಾದ ಪಾಲು ಶೇ. 22 ಆಗಿದೆ.
ಜನವರಿ 2020ರಿಂದ ಜುಲೈ 2020 ಅವಧಿಗೆ ಹೋಲಿಸಿದಾಗ ಜುಲೈ-ಡಿಸೆಂಬರ್ ಅವಧಿಯಲ್ಲಿ ಟ್ವಿಟರ್ ಗೆ ಭಾರತ ಸರಕಾರದಿಂದ ಶೇ.46ರಷ್ಟು ಹೆಚ್ಚು ಮನವಿಗಳು (1,096) ಬಂದಿವೆ, ಜುಲೈ-ಡಿಸೆಂಬರ್ 2020 ಅವಧಿಯಲ್ಲಿ ಭಾರತ 3,463 ಮನವಿಗಳು ಸಲ್ಲಿಸಿದ್ದರೆ 152 ತುರ್ತು ಮನವಿಗಳನ್ನು ಸಲ್ಲಿಸಿವೆ. ಈ ತುರ್ತು ಮನವಿಗಳನ್ನು ಕಾನೂನಾತ್ಮಕವಾಗಿ ಸಲ್ಲಿಸಲಾಗಿತ್ತು.
ಜಾಗತಿಕವಾಗಿ ಸರಕಾರಗಳು ಮಾಹಿತಿ ಕೋರಿ ಸಲ್ಲಿಸಿದ ಮನವಿಗಳ ಪೈಕಿ ಶೇ.70ರಷ್ಟು ಪ್ರಕರಣಗಳಲ್ಲಿ ಮಾಹಿತಿ ಒದಗಿಸಿಲ್ಲ ಇದು ಅದರ ಹಿಂದಿನ ಅವಧಿಗೆ ಹೋಲಿಸಿದಾಗ ಶೇ.7ರಷ್ಟು ಏರಿಕೆಯಾಗಿದೆ ಎಂದು ಟ್ವಿಟರ್ ಹೇಳಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.