ನವದೆಹಲಿ: ಇತ್ತೀಚೆಗೆ ಭಾರತದ ಅವಿಭಾಜ್ಯ ಅಂಗಗಳಾದ ಲಡಾಖ್, ಜಮ್ಮು ಮತ್ತು ಕಾಶ್ಮೀರಗಳನ್ನು ಚೀನಾದ ಭೂಪಟದಲ್ಲಿ ತೋರಿಸಿ ವಿಶ್ವಾದ್ಯಂತ ಟ್ವಿಟ್ಟರ್ ಸಂಸ್ಥೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದೀಗ ತನ್ನ ತಪ್ಪಿನ ಅರಿವಾಗಿ ಟ್ವಿಟರ್ ಸಂಸ್ಥೆ ಭಾರತದ ಕ್ಷಮೆ ಕೋರಿದೆ. ಹೌದು ಈ ಕುರಿತಂತೆ ಭಾರತದ ಜಂಟಿ ಸಂಸದೀಯ ಸಮಿತಿಗೆ ಟ್ವಿಟರ್ ಸಂಸ್ಥೆಯ ವಕ್ತಾರರು ಮೌಖಿಕ ಕ್ಷಮೆಯಾಚಿಸಿದ್ದು, ಲಿಖಿತ ಉತ್ತರದಲ್ಲಿ ಈ ಕ್ಷಮೆ ಕೋರಲಾಗಿರುವುದು ಗೊತ್ತಾಗಿದೆ. ಅಲ್ಲದೇ ಟ್ವಿಟ್ಟರ್ ವಕ್ತಾರರು ಭಾರತ ಸರ್ಕಾರದೊಂದಿಗೆ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ ಮತ್ತು ದೇಶದ ಸೂಕ್ಷ್ಮತೆಗಳನ್ನು ಗೌರವಿಸುತ್ತೇವೆ ಎಂದು ಪತ್ರದಲ್ಲಿ ಹೇಳಿದ್ದಾರೆ ಎಂಬ ವಿಚಾರವೂ ಕೆಲ ಮೂಲಗಳಿಂದ ತಿಳಿದುಬಂದಿದೆ.

ಇನ್ನೂ ಟ್ವಿಟರ್ ವಕ್ತಾರರು ಸಲ್ಲಿಸಿರುವ ಪತ್ರವನ್ನು ಜಂಟಿ ಸಂಸದೀಯ ಸಮಿತಿ ಸ್ವೀಕರಿಸಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಚೀನಾದಲ್ಲಿ ತೋರಿಸಿದ್ದ ಟ್ವಿಟರ್ ವಿರುದ್ಧ ಸಂಸತ್ ಸಮಿತಿ ಕೆಂಡಾಮಂಡಲವಾಗಿತ್ತು. ಈ ಬಗ್ಗೆ ಲಿಖಿತ ಪ್ರತಿಕ್ರಿಯೆ ಹಾಗೂ ಪ್ರಮಾಣಪತ್ರ ಸಲ್ಲಿಕೆ ಮಾಡುವಂತೆ ಸೂಚನೆ ಕೂಡ ನೀಡಿತ್ತು. ಅದರಂತೆಯೇ ಟ್ವಿಟ್ಟರ್ ಸಂಸ್ಥೆ ಇದೀಗ ಕ್ಷಮೆಯಾಚಿಸಿದೆ.
ಗುಜರಾತ್ ನ ಮಾಜಿ ಸಿಎಂ ಕೇಶುಭಾಯ್ ಪಟೇಲ್ ನಿಧನ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel