ಸದ್ಯಕ್ಕಿಲ್ಲ ಟ್ವಿಟರ್ ಖರೀದಿ  ಹೋಲ್ಡ್ ನಲ್ಲಿಟ್ಟ ಎಲೋನ್ ಮಸ್ಕ್…

1 min read

ಸದ್ಯಕ್ಕಿಲ್ಲ ಟ್ವಿಟರ್ ಖರೀದಿ  ಹೋಲ್ಡ್ ನಲ್ಲಿಟ್ಟ ಎಲೋನ್ ಮಸ್ಕ್…

ವಿಶ್ವದ ಅತಿದೊಡ್ಡ ಮೈಕ್ರೋಬ್ಲಾಗಿಂಗ್  ಪ್ಲಾಟ್ ಪಾರ್ಮ್ ಟ್ವೀಟರ್ ಖರೀದಿಯನ್ನ ತಾತ್ಕಾಲಿಕವಾಗಿ ತಡೆಯಿಡಿಯಲಾಗಿದೆ ಎಂದು ಎಲೋನ್ ಮಸ್ಕ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ. ಟ್ವಿಟರ್ ಖರೀದಿಸಲು  44 ಬಿಲಿಯನ್ ಡಾಲರ್  ಒಪ್ಪಂದ ಮಾಡಿಕೊಳ್ಳಲು ಎಲಾನ್ ಮಸ್ಕ್ ಮುಂದಾಗಿದ್ದ.

ಸ್ಪ್ಯಾಮ್ ಅಥವಾ ಸುಳ್ಳು ಖಾತೆಗಳ ಕುರಿತು ಬಾಕಿ ಉಳಿದಿರುವ ತನಿಖೆಯಿಂದಾಗಿ ಟ್ವಿಟ್ಟರ್ ಕಂಪೆನಿಯನ್ನು ಖರೀದಿಸುವ ಒಪ್ಪಂದವು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.  ಸ್ಪ್ಯಾಮ್ ಮತ್ತು ನಕಲಿ ಖಾತೆಗಳು 5% ಗಿಂತ ಕಡಿಮೆ ಅಕೌಂಟ್ ಗಳನ್ನ ಹೊಂದಿವೆ ಎಂಬ ಲೆಕ್ಕಾಚಾರದ  ತನಿಖೆ  ಬಾಕಿ ಉಳಿದಿವೆ ಎಂದು ಟೆಸ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಳಿದರು.

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಎಲೋನ್ ಮಸ್ಕ್ ಇತ್ತೀಚೆಗೆ ತನ್ನ ಆದ್ಯತೆಗಳಲ್ಲಿ ಒಂದು “ಸ್ಪ್ಯಾಮ್ ಬಾಟ್‌ಗಳನ್ನು” ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕುವುದಾಗಿ ಹೇಳಿದ್ದರು. ವರದಿಗಳ ಪ್ರಕಾರ, ಷೇರುಪೇಟೆಯಲ್ಲಿ  ಟ್ವಿಟರ್ ಮತ್ತು ಟೆಸ್ಲಾ ಎರಡರ ಸ್ಟಾಕ್ ಗಳು ತೀವ್ರವಾಗಿ ಕುಸಿದಿವೆ.

Twitter deal temporarily on hold: Elon Musk

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd