ಟ್ವಿಟರ್ ಇನ್ನು ಮುಂದೆ ಬಳಕೆದಾರರಿಗೆ ಫ್ರೀ ಅಲ್ಲ. ಆದರೆ…
ಎಲಾನ್ ಮಸ್ಕ್ ಸದ್ಯ ಟ್ರೆಂಡಿಗ್ ನಲ್ಲಿರುವ ವ್ಯಕ್ತಿ, ಯಾಕಂದ್ರೆ ಟ್ವೀಟರ್ ಈಗ ಆತನ ವಶವಾಗಿದೆ. ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಟ್ವೀಟರ್ ಅನ್ನ ಕೊಂಡು ಕೊಂಡಾಗಿನಿಂದಲೂ ಆತನ ನಡೆಗಳು ಎಲ್ಲೆಡೆ ಸುದ್ದಿಯಾಗುತ್ತಿವೆ. ಟ್ವೀಟರ್ ನಲ್ಲಿ ಆತ ತರಬಹುದಾದ ಫೀಚರ್ಸ್ ಮತ್ತು ಬದಲಾವಣೆಗಳ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ ಡೈರೆಕ್ಟ್ ಮೆಸೇಜ್ ಗಳು ಎನ್ ಕ್ರಿಪ್ಟಿಂಗ್ ನಲ್ಲಿರಬೇಕು ಎಂದು ಹೇಳಿದ್ದಿರು. ಇದೀಗ ಟ್ವೀಟರ್ ಬಳೆಕೆದರರ ಜೇಬಿಗೆ ಕೈ ಹಾಕಲು ಮುಂದಾಗಿದ್ದಾರೆ. ಆದರೆ ಅದು ಸಾಮಾನ್ಯ ಬಳಕೆದಾರರ ಮೇಲಲ್ಲ ಎನ್ನುವುದೇ ಸಮಾಧಾನದ ವಿಷಯ.
Twitter Inc ಯಾವಾಗಲೂ ಕ್ಯಾಶುಯಲ್ ಬಳಕೆದಾರರಿಗೆ ಉಚಿತವಾಗಿರುತ್ತದೆ ಆದರೆ ವಾಣಿಜ್ಯ ಮತ್ತು ಸರ್ಕಾರಿ ಬಳಕೆದಾರರಿಗೆ ಅತ್ಯಲ್ಪ ಶುಲ್ಕವನ್ನು ವಿಧಿಸಬಹುದು ಎಂದು ಹೇಳಿದ್ದಾರೆ. ಇತ್ತೀಚೆಗೆ ಕಂಪನಿಯನ್ನು ತನ್ನ ಕಾರ್ಟ್‌ಗೆ ಸೇರಿಸಿದ ನಂತರ, ಮಸ್ಕ್ ಅವರು ಹೊಸ ವೈಶಿಷ್ಟ್ಯಗಳೊಂದಿಗೆ ಪ್ಲಾಟ್‌ಫಾರ್ಮ್ನ್ನ ನವೀಕರಿಸಲು ಪ್ರಯತ್ನಿಸುತ್ತಿದ್ದಾರೆ, ಈ ಮೂಲಕ ಬಳಕೆದಾರರ ನಂಬಿಕೆಯನ್ನು ಹೆಚ್ಚಿಸಲು, ಸ್ಪ್ಯಾಮ್ ಬಾಟ್‌ಗಳನ್ನು ಸೋಲಿಸಲು ಬಯಸುವುದಾಗಿ ಹೇಳಿದರು.
ಕಳೆದ ತಿಂಗಳು, ಟ್ವಿಟರ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೊದಲು, ಮಸ್ಕ್ ಟ್ವಿಟರ್ ಬ್ಲೂ ಪ್ರೀಮಿಯಂ ಚಂದಾದಾರಿಕೆ ಸೇವೆಗೆ ಅದರ ಬೆಲೆಯನ್ನು ಕಡಿತಗೊಳಿಸುವುದು ಸೇರಿದಂತೆ ಕೆಲವು ಬದಲಾವಣೆಗಳನ್ನು ಸೂಚಿಸಿದ್ದರು.
Twitter may charge a nominal fee for commercial and government users, says Elon Musk