ನೋಕಿಯಾ ಕಂಪನಿಗಳ ಸ್ಮಾರ್ಟ್ ಫೋನ್ ಯುಎಸ್ ನಲ್ಲಿ ಎರಡು ಫೋನ್ ಗಳನ್ನು ಅನಾವರಣಗೊಳಿಸಿದೆ.
ನೋಕಿಯಾಗೆ ಭಾರತದಲ್ಲಿ ಬೇಡಿಕೆ ಕಡಿಮೆ. ರೆಡ್ಮಿ, ರಿಯಲ್ ಮಿ, ಸ್ಯಾಮ್ಸಂಗ್, ಒಪ್ಪೋ ಕಂಪನಿಗಳ ಪದಾರ್ಪಣೆಯ ನಂತರ ದೇಶದಲ್ಲಿ ಈ ಫೋನ್ ಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಹೀಗಾಗಿ ನೋಕಿಯಾ ವಿದೇಶದಲ್ಲಿ ಮಾತ್ರ ಸದ್ದು ಮಾಡುತ್ತಿದೆ. ಈಗ ನೋಕಿಯಾ G310 5G (Nokia G310 5G) ಮತ್ತು ನೋಕಿಯಾ C210 ಬಿಡುಗಡೆ ಮಾಡಿದೆ.
ಈ ಎರಡೂ ಸ್ಮಾರ್ಟ್ಫೋನ್ಗಳು ಯುಎಸ್ ಮಾರುಕಟ್ಟೆಯಲ್ಲಿ ಅನಾವರಣಗೊಂಡಿವೆ. ಈ ಫೋನ್ಸ್ ಸ್ನಾಪ್ಡ್ರಾಗನ್ ಚಿಪ್ಸೆಟ್ಗಳಿಂದ ಚಾಲಿತವಾಗಿದ್ದು, ಆಕರ್ಷಕ ಕ್ಯಾಮೆರಾ, ಬ್ಯಾಟರಿ ಆಯ್ಕೆ ಕೂಡ ನೀಡಲಾಗಿದೆ. ಈ ಫೋನ್ ಗಳು ಸದ್ಯದಲ್ಲಿಯೇ ಭಾರತಕ್ಕೂ ಪಾದಾರ್ಪಣೆ ಮಾಡಲಿವೆ.
ನೋಕಿಯಾ G310 5G ಸ್ಮಾರ್ಟ್ಫೋನ್ಗೆ ಯುಎಸ್ನಲ್ಲಿ USD 186, ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 15,000 ರೂ. ನೋಕಿಯಾ C210 ಫೋನಿಗೆ USD 109 (ಸುಮಾರು ರೂ. 9,000) ಬೆಲೆ ಹೊಂದಿದೆ.