ಮೀನುಗಾರಿಕೆಗೆ ಹೋಗಿ ಕಾಣೆಯಾಗಿದ್ದ ಸಹೋದರಿಬ್ಬರು ಶವವಾಗಿ ಪತ್ತೆ…
1 min read
ಮೀನುಗಾರಿಕೆಗೆ ಹೋಗಿ ಕಾಣೆಯಾಗಿದ್ದ ಸಹೋದರಿಬ್ಬರು ಶವವಾಗಿ ಪತ್ತೆ…
ವಿಜಯಪುರ ಜಿಲ್ಲೆಯ ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದಾಗ ತೆಪ್ಪ ಮುಳುಗಿ ಕಾಣೆಯಾಗಿದ್ದ ಸಹೋದರರಿಬ್ಬರು ಇಂದು ಶವವಾಗಿ ಕಂಡುಬಂದಿದ್ದಾರೆ. ಕೊಲ್ಹಾರ ತಾಲೋಕಿನ ಬಳೂತಿ ಜಾಕ್ವೆಲ್ ಬಳಿ ಮೃತದೇಹಗಳು ಪತ್ತೆಯಾಗಿವೆ. ಬಳೂತಿ ಗ್ರಾಮದ ಬಸಪ್ಪ ಮಳೆಪ್ಪ ದಳವಾಯಿ (29) ಅಜೀತ್ ಮಳೆಪ್ಪ ದಳವಾಯಿ (25) ಮೃತರು.
ಮೊನ್ನೆ ಸಂಜೆ ಕೃಷ್ಣಾ ನದಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಭಾರಿ ಗಾಳಿ-ಮಳೆಯಿಂದಾಗಿ ತೆಪ್ಪ ಮಗುಚಿ ನೀರು ಪಾಲಾಗಿದ್ದರು. ಮಾಹಿತಿ ತಿಳಿದ ಬಳಿಕ ಅಗ್ನಿಶಾಮಕ ಸಿಬ್ಬಂದಿ ನಿರಂತರ ಹುಡುಕಾಟ ನಡೆಸಿದ್ದರು. ಸ್ಥಳಿಯ ಮೀನುಗಾರರ ಸಹಾಯದಿಂದ ಇಂದು ಇಬ್ಬರು ಸಹೋದರರ ಶವಗಳನ್ನು ಸಿಬ್ಬಂದಿ ಹೊರತಂದಿದ್ದಾರೆ.
ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.