ಸೀಬೆ ಹಣ್ಣು ಕೀಳಲು ಹೋಗಿ ಇಬ್ಬರು ಬಾಲಕಿಯರ ಸಾವು
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ಸೀಬೆ ಹಣ್ಣು ಕೀಳಲು ಹೋಗಿ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದಾರೆ.
ಪೂಜಾ (10) ಪುಣ್ಯ (15) ಮೃತ ಬಾಲಕಿಯರು. ಸೀಬೆ ಹಣ್ಣು ಕೀಳಲು ಹೋಗಿ ಪೂಜಾ ಮತ್ತು ಪುಣ್ಯ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ಈ ಇಬ್ಬರು ರೇಚಣ್ಣ ಎಂಬವರ ಪುತ್ರಿಯರಾಗಿದ್ದಾರೆ. ಇಂದು ಬೆಳಗ್ಗೆ ತಿಂಡಿ ತಿಂದು ಬಳಿಕ ಸೀಬೆ ಹಣ್ಣು ಕೀಳಲೆಂದು ಜಮೀನಿಗೆ ತೆರಳಿದ್ದಾರೆ. ಅಲ್ಲದೆ ಸೀಬೆ ಮರ ಹತ್ತಿ ಹಣ್ಣು ಕೀಳುತ್ತಿರುವಾಗ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.








