ಗುಜರಾತ್ನಲ್ಲಿ ಒಮಿಕ್ರಾನ್ ರೂಪಾಂತರ ಪತ್ತೆ. ಭಾರತದಲ್ಲಿ 25ಕ್ಕೇರಿದ ಸಂಖ್ಯೆ
ಒಮಿಕ್ರಾನ್ ರೂಪಾಂತರದ ಸೋಂಕಿಗೆ ಒಳಗಾದವರ ಸಂಖ್ಯೆ ದಿನದಿಂದ ದಿನಕ್ಕೆ ಭಾರತದಲ್ಲಿ ಏರಿಕೆಯಾಗುತ್ತಿದೆ. ಗುಜರಾತ್ನಲ್ಲಿ ಮತ್ತೆ ಎರಡು ಒಮಿಕ್ರಾನ್ ಪ್ರಕರಣಗಳು ಶುಕ್ರವಾರ ವರದಿಯಾಗಿದೆ. ಈ ಮೂಲಕ ಭಾರತದಲ್ಲಿ ಒಮಿಕ್ರಾನ್ ರೂಪಾಂತರದ ಸಂಖ್ಯೆ 25 ಕ್ಕೆ ಏರಿಕೆಯಾಗಿದೆ.
ಡಿಸೆಂಬರ್ 4 ರಂದು ದಕ್ಷಿಣ ಆಫ್ರಿಕಾದ ಜಿಂಬಾಂಬ್ವೆಯಿಂದ ಜಾಮ್ನಗರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ವ್ಯಕ್ತಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂತ್ತು. ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಆತನ ಪತ್ನಿ ಮತ್ತು ಸೋದರ ಮಾವ ಅವರಿಗೂ ಕೋವಿಡ್ ತಪಾಸಣೆ ನಡೆಸಲಾಗಿತ್ತು.
ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್(ಜಿಬಿಆರ್ಸಿ) ನಲ್ಲಿ ಸ್ವ್ಯಾಬ್ ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ ಒಳಪಡಿಸಲಾಗಿದ್ದು, ಇಬ್ಬರಿಗೂ ಓಮಿಕ್ರಾನ್ ದೃಢಪಟ್ಟಿದೆ ಎಂದು ಜಾಮ್ನಗರ ಮುನ್ಸಿಪಲ್ ಕಾರ್ಪೊರೇಷನ್ (ಜೆಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ.
ಇದರೊಂದಿಗೆ, ಗುಜರಾತ್ನಲ್ಲಿ ಈಗ ಒಮಿಕ್ರಾನ್ನ ಸೋಕಿತರ ಸಂಖ್ಯೆ ಮೂರಕ್ಕೇರಿದೆ. ಸೋಂಕಿತರನ್ನು ನಗರದ ಸರ್ಕಾರಿ ಗುರು ಗೋಬಿಂದ್ ಸಿಂಗ್ ಸರ್ಕಾರಿ ಆಸ್ಪತ್ರೆಯಲ್ಲಿರುವ ವಿಶೇಷ ಓಮಿಕ್ರಾನ್ ವಾರ್ಡ್ಗೆ ಸ್ಥಳಾಂತರಿಸಲಾಗಿದೆ ಎಂದು ಜೆಎಂಸಿ ಪ್ರಕಟಣೆ ತಿಳಿಸಿದೆ.