ನೈಟ್ ಕ್ಲಬ್ ನಲ್ಲಿ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ಗ್ಲಾಸ್ ಬಾಲ್ಕನಿ ಕುಸಿದು ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೆಕ್ಸಿಕೋದ ಸ್ಯಾನ್ ಲೂಯಿಸ್ ಪೊಟೋಸಿ ಎಂಬಲ್ಲಿ ನಡೆಯುತ್ತಿದ್ದ ನೈಟ್ ಕ್ಲಬ್ ಒಂದರಲ್ಲಿ ಜನಪ್ರಿಯ ಮೆಕ್ಸಿಕನ್ ಕಲಾವಿದ ಕೆವಿನ್ ಮೊರೆನೊ ಅವರ ಸಂಗೀತ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಹಲವರು ಭಾಗವಹಿಸಿದ್ದರು. ಆದರೆ, ಏಕಾಏಕಿ ಗಾಜಿನ ಬಾಲ್ಕನಿ ಛಿದ್ರಗೊಂಡು ಕುಸಿದು ಬಿದ್ದಿದೆ. ಪರಿಣಾಮ ಅದರ ಪಕ್ಕದಲ್ಲಿ ನಿಂತಿದ್ದವರು ಕೆಳಕ್ಕೆ ಬಿದ್ದಿದ್ದಾರೆ. ಅವಘಡಲ್ಲಿ ಇಬ್ಬರು ಸಾವನ್ನಪ್ಪಿದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತಿದೆ. ವೈರಲ್ ವಿಡಿಯೋದಲ್ಲಿ ಕಟ್ಟಡದ ಮೇಲಿಂದ ಒಂದಷ್ಟು ಜನ ಕೆಳಗೆ ಬೀಳುವಂತಹ ದೃಶ್ಯ ಕಾಣಬಹುದು. ನೈಟ್ ಕ್ಲಬ್ ಒಂದರ ಗ್ಲಾಸ್ ಬಾಲ್ಕನಿ ಮೇಲೆ ನಿಂತು ಪಾರ್ಟಿ ಎಂಜಾಯ್ ಮಾಡುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಗ್ಲಾಸ್ ಬಾಲ್ಕನಿ ಛಿದ್ರಗೊಂಡು ಅದರ ಮೇಲೆ ನಿಂತಿದ್ದ 10 ರಿಂದ 12 ಜನ 40 ಅಡಿ ಎತ್ತರದಿಂದ ಬಿದ್ದಿದ್ದಾರೆ.