ಮಂಗಳೂರು: ಇಬ್ಬರು ಯುವಕರು ಈಜಲು ತೆರಳಿದ್ದ ಸಂದರ್ಭದಲ್ಲಿ ನೀರುಪಾಲಾಗಿರುವ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲ ಹತ್ತಿರ ನಡೆದಿದೆ. ಅರಬ್ಬಿ ಸಮುದ್ರದಲ್ಲಿ ಈಜಲು ತೆರಳಿದ ಇಬ್ಬರು ಪ್ರವಾಸಿಗರು ನೀರುಪಾಲಾಗಿದ್ದಾರೆ. ಸಲ್ಮಾನ್(19), ಬಶೀರ್(23) ಸಾವನ್ನಪ್ಪಿದ ದುರ್ದೈವಿಗಳು. ಅಲ್ಲದೇ, ಓರ್ವ ಯುವಕ ಸೈಫ್ ಆಲಿನನ್ನು ಸ್ಥಳೀಯ ಜೀವರಕ್ಷಕ ತಂಡ ರಕ್ಷಿಸಿದೆ. ಮೂವರೂ ಚಿಕ್ಕಮಗಳೂರು ಮೂಲದವರು ಎನ್ನಲಾಗಿದೆ. ಇವರೆಲ್ಲ ಸೇರಿಕೊಂಡು ಉಳ್ಳಾಲ ದರ್ಗಾಗೆ ತೆರಳಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.