ಸೆಪ್ಟೆಂಬರ್ 4ರಿಂದ ದ್ವಿಚಕ್ರ ವಾಹನ ಬಿಐಎಸ್ ಪ್ರಮಾಣೀಕೃತ ಹೆಲ್ಮೆಟ್ ಕಡ್ಡಾಯ ?
ಹೊಸದಿಲ್ಲಿ, ಅಗಸ್ಟ್ 2: ದ್ವಿಚಕ್ರ ವಾಹನ ಬಳಕೆದಾರರಿಗೆ ಉತ್ತಮ ಗುಣಮಟ್ಟದ ಹೆಲ್ಮೆಟ್ ಗಳನ್ನು ಕಡ್ಡಾಯಗೊಳಿಸಲು , ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮತ್ತು ಹೆದ್ದಾರಿಗಳು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಪ್ರಮಾಣೀಕೃತ ಹೆಲ್ಮೆಟ್ಗಳನ್ನು ಮಾತ್ರ ಭಾರತದಲ್ಲಿ ಉತ್ಪಾದಿಸಿ ಮಾರಾಟ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ.
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಆಕ್ಟ್, 2016 ರ ಪ್ರಕಾರ ಕಡ್ಡಾಯ ಪ್ರಮಾಣೀಕರಣದಡಿಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ರಕ್ಷಣಾತ್ಮಕ ಹೆಲ್ಮೆಟ್ಗಳನ್ನು ತರಲು ಕರಡು ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ಭಾರತದಲ್ಲಿ ದ್ವಿಚಕ್ರ ವಾಹನಗಳು ಬಿಐಎಸ್ ಪ್ರಮಾಣೀಕೃತ ಹೆಲ್ಮೆಟ್ಗಳನ್ನು ಮಾತ್ರ ಹೊಂದಲು ಸಾಧ್ಯವಾಗುತ್ತದೆ.
ಜೊತೆಗೆ ಇಂಥ ಮಾನ್ಯತೆ ಹೊಂದಿದ ಹೆಲ್ಮೆಟ್ಗಳನ್ನು ತಯಾರಿಸಲು ಹಾಗೂ ಮಾರಾಟ ಮಾಡಲು ಆವಕಾಶ ಇರಲಿದೆ ಎಂದು ಸಚಿವಾಲಯದ ಹೇಳಿಕೆ ನೀಡಿದೆ.
ಕರಡು ಅಧಿಸೂಚನೆಯ ಕುರಿತು ಮಧ್ಯಸ್ಥಗಾರರು ತಮ್ಮ ಸಲಹೆಗಳನ್ನು ಜಂಟಿ ಕಾರ್ಯದರ್ಶಿ (ಎಂವಿಎಲ್), ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಸಾರಿಗೆ ಭವನ, ಪಾರ್ಲಿಮೆಂಟ್ ಸ್ಟ್ರೀಟ್, ನವದೆಹಲಿ -110001 (ಇಮೇಲ್: jspb-morth@gov.in) ಗೆ 30 ದಿನಗಳಲ್ಲಿ ಕಳುಹಿಸಬಹುದು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಅಂತಿಮ ಅಧಿಸೂಚನೆ ಹೊರಡಿಸಿದ ನಂತರ, ಬಿಐಎಸ್ ಅಲ್ಲದ ಪ್ರಮಾಣೀಕೃತ ಹೆಲ್ಮೆಟ್ ಮಾರಾಟ ಅಥವಾ ತಯಾರಿಕೆ ಅಪರಾಧವಾಗಿರುತ್ತದೆ. ಭಾರತದಲ್ಲಿ, ಮಾರಾಟವಾದ ಸುಮಾರು 70% ಹೆಲ್ಮೆಟ್ಗಳು ಬಿಐಎಸ್ ಮಾನದಂಡಗಳಿಗೆ ಅನುಗುಣವಾಗಿಲ್ಲ.
ಬಿಐಎಸ್ ಪ್ರಮಾಣೀಕರಣವು ದ್ವಿಚಕ್ರ ವಾಹನ ಹೆಲ್ಮೆಟ್ಗಳ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ರಸ್ತೆ ಸುರಕ್ಷತೆಯ ಸನ್ನಿವೇಶವನ್ನು ಸುಧಾರಿಸುತ್ತದೆ. ಅಲ್ಲದೇ ದ್ವಿಚಕ್ರ ವಾಹನಗಳನ್ನು ಒಳಗೊಂಡ ಮಾರಣಾಂತಿಕ ಗಾಯಗಳನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.
ಈ ನಿಯಮದಿಂದಾಗಿ ಕಳಪೆ ಹೆಲ್ಮೆಟ್ಗಳ ತಯಾರಿಕೆ ಮತ್ತು ಬಳಕೆಗೆ ಕಡಿವಾಣ ಬೀಳಲಿದೆ. ಸೆಪ್ಟೆಂಬರ್ 4 ರಿಂದ ಜಾರಿಗೆ ಬರಲಿರುವ ಹೊಸ ದ್ವಿಚಕ್ರ ವಾಹನ ಹೆಲ್ಮೆಟ್ ಮಾನದಂಡಗಳ ಬಗ್ಗೆ ಈಗಾಗಲೇ ಅಧಿಸೂಚನೆ ಹೊರಡಿಸಿದೆ.