U-19 World Cup | ಭಾರತಕ್ಕೆ ದಕ್ಷಿಣ ಆಫ್ರಿಕಾ ಸವಾಲು

1 min read
U-19 World Cup South Africa's challenge to India saaksha tv

U-19 World Cup | ಭಾರತಕ್ಕೆ ದಕ್ಷಿಣ ಆಫ್ರಿಕಾ ಸವಾಲು

ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ  ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಇಂದಿನಿಂದ ಟೀಂ ಇಂಡಿಯಾ ಅಭಿಯಾನ ಆರಂಭಿಸಲಿದೆ.

ಭಾರತ  ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. 

ಪಂದ್ಯ ಗಯಾನಾ ಮೈದಾನದಲ್ಲಿ ನಡೆಯಲಿದ್ದು, ಉತ್ತಮ ಫಾರ್ಮ್ ನಲ್ಲಿರುವ ಟೀಂ ಇಂಡಿಯಾ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಈವರೆಗೂ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ  ಒಟ್ಟು 7 ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ 3 ಮತ್ತು  ದಕ್ಷಿಣ ಆಫ್ರಿಕಾ ತಂಡ 4 ರಲ್ಲಿ ಜಯ ಸಾಧಿಸಿದೆ.

U-19 World Cup South Africa's challenge to India  saaksha tv

ಅಂಡರ್-19 ವಿಶ್ವಕಪ್ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಭಾರತ ತಂಡ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ತಂಡಗಳನ್ನು ಸೋಲಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ವಿಶ್ವಕಪ್‌ಗೆ ಭಾರತೀಯ ತಂಡ: ಯಶ್ ಧುಲ್ (ನಾಯಕ), ಹರ್ನೂರ್ ಸಿಂಗ್, ಆಂಗ್‌ಕ್ರಿಶ್ ರಘುವಂಶಿ, ಎಸ್‌ಕೆ ರಶೀದ್ (ಉಪನಾಯಕ), ನಿಶಾಂತ್ ಸಿಂಧು,

ಸಿದ್ಧಾರ್ಥ್ ಯಾದವ್, ಅನೀಶ್ವರ್ ಗೌತಮ್, ದಿನೇಶ್ ಬಾನಾ (ಡಬ್ಲ್ಯುಕೆ), ಆರಾಧ್ಯ ಯಾದವ್ (ವಿಕೆಟ್ ಕೀಪರ್), ರಾಜ್ ಅಂಗದ್ ಬಾವಾ , ಮಾನವ್ ಪ್ರಕಾಶ್,

ಕೌಶಲ್ ತಾಂಬೆ, ಆರ್ ಎಸ್ ಹಂಗಾರೇಕರ್, ವಾಸು ವಾಟ್ಸ್, ವಿಕ್ಕಿ ಓಸ್ತ್ ವಾಲ್, ರವಿಕುಮಾರ್, ಗರ್ವ್ ಸಾಂಗ್ವಾನ್.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd