Uber Ola | ಓಲಾ ಉಬರ್ ಕಳ್ಳಾಟಕ್ಕೆ ಬ್ರೇಕ್ ಬೀಳುತ್ತಾ ?
ಬೆಂಗಳೂರು : ಓಲಾ ಊಬರ್ ಆಟೋಗಳಲ್ಲಿ ಸರ್ಕಾರ ನಿಗದಿ ಮಾಡಿರುವ ಹಣಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಉತ್ತರ ನೀಡುವಂತೆ ಸಾರಿಗೆ ಇಲಾಖೆ ಆಯುಕ್ತರು ಕಂಪನಿಗಳಿಗೆ ಸೂಚನೆ ನೀಡಿದರು.
ಆದ್ರೆ ಈ ಬಗ್ಗೆ ಕಂಪನಿಗಳು ಕ್ಯಾರೆ ಎನ್ನದ ಕಾರಣ ಹಿನ್ನೆಲೆಯಲ್ಲಿ ಮಂಗಳವಾರದಿಂದ ಓಲಾ, ಉಬರ್ ಆಪ್ ಆಧಾರಿತ ಆಟೋ ಸೇವೆಗೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ.

ಅಲ್ಲದೆ ಆಪ್ ಮೂಲಕ ಕಾರ್ಯನಿರ್ವಹಿಸುತ್ತಿರುವ ಆಟೋಗಳಿಗೆ ಸೀಝ್ ಮಾಡುವ ಎಚ್ಚರಿಕೆ ನೀಡಿದೆ.
ಸಾರಿಗೆ ಇಲಾಖೆಯ ಎಚ್ಚರಿಕೆ ಬೆನ್ನಲ್ಲೆ ಆಟೋ ಚಾಲಕರಿಗೆ ಆತಂಕ ಹೆಚ್ಚಾಗಿದ್ದು, ಆಪ್ ಬಳಕೆ ಮಾಡದಿರಲು ಚಾಲಕರು ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಕೆಲ ಆಟೋ ಚಾಲಕರು ಆಪ್ ಬಂದ್ ಮಾಡಿದ್ರೆ ಸಮಸ್ಯೆ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.