ಉಡುಪಿ | ಕೊರೊನಾ ನಿಮಯ ಗಾಳಿಗೆ ತೂರಿದ ಸಾರಿಗೆ ಸಿಬ್ಬಂದಿ lockdown
ಉಡುಪಿ : ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಜನ ಕೊರೊನಾ ನಿಯಮವನ್ನ ಗಾಳಿಗೆ ತೂರಿ ಓಡಾಡುತ್ತಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಸದ್ಯ ಎಲ್ಲಾ ಬಗೆಯ ಬಸ್ ಗಳಲ್ಲಿ ಶೇ.50 ರಷ್ಟು ಪ್ರಯಾಣಿಕರ ಜೊತೆ ಸಂಚರಿಸಲು ಅವಕಾಶ ನೀಡಲಾಗಿದೆ. ಆದರೆ ಬಸ್ ಗಳಲ್ಲಿ ಈ ನಿಯಮ ಪಾಲನೆ ಆಗುತ್ತಿಲ್ಲ.
ಜಿಲ್ಲೆಯಲ್ಲಿ ಬಹುತೇಕರು ಸರ್ಕಾರಿ ಬಸ್ ಗಳನ್ನು ಅವಲಂಭಿಸಿದ್ದು, ಬೆರಳೆಣಿಕೆಯ ಸರ್ಕಾರಿ ಬಸ್ ಗಳು ಮಾತ್ರ ಜಿಲ್ಲೆಯೊಳಗೆ ಓಡಾಟ ನಡೆಸುತ್ತಿವೆ.
ಜಿಲ್ಲಾಧಿಕಾರಿಗಳ ಆದೇಶದ ಹೊರತಾಗಿಯೂ ಸರ್ಕಾರಿ ಬಸ್ ಗಳು ಫುಟ್ ಬೋರ್ಡ್ ವರೆಗೂ ಪ್ರಯಾಣಿಕರನ್ನು ತುಂಬಿಸಿಕೊಂಡು ಓಡಾಡುತ್ತಿವೆ. ಹೀಗಾಗಿ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.