ಶ್ರ್ರೀ ಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಉಡುಪಿಯ ಮಂದಿರದಲ್ಲಿ ಸಿದ್ಧತೆ ನಡೆದಿದೆ. ದೇಶದ ಹಲವು ಭಾಗಗಳಿಂದ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ. ಹೀಗಾಗಿ ಉಡುಪಿ ಮಠವು ಝಗಮಗಿಸುತ್ತಿದೆ.
ಅಷ್ಟಮಿಯ ದಿನ ನಡುರಾತ್ರಿ 11:42ಕ್ಕೆ ಅರ್ಘ್ಯಪ್ರದಾನ ನಡೆದರೆ, ಮರುದಿನ ವಿಟ್ಲಪಿಂಡಿ ಮಹೋತ್ಸವ ನಡೆಯಲಿದೆ.ಉಡುಪಿಯಲ್ಲಿ ಎರಡು ದಿನಗಳ ಕಾಲ ಅಷ್ಟಮಿ ಮಹೋತ್ಸವ ಜರುಗಲಿದೆ. ಆಚಾರ್ಯ ಮಧ್ವರಿಂದ ಎಂಟು ಶತಮಾನಗಳ ಹಿಂದೆ ಪ್ರತಿಷ್ಠಾಪಿಸಲ್ಪಟ್ಟಿದ್ದ ಉಡುಪಿಯ ಕಡಗೋಲ ಕೃಷ್ಣನ ಆರಾಧನೆಗೆ ಇದು ಪರ್ವಕಾಲ. ಬುಧವಾರ ಕೃಷ್ಣ ಜನ್ಮಾಷ್ಟಮಿಯ ದಿನ ಹಗಲೆಲ್ಲ ಭಕ್ತರು ಉಪವಾಸ ಇರುತ್ತಾರೆ.
ಉಡುಪಿಯಲ್ಲಿ ಈಗ ಎಲ್ಲಿ ನೋಡಿದರೂ ಹೂವೇ ಕಾಣುತ್ತಿದೆ. ಹೀಗಾಗಿ ಹೂವಿನ ವ್ಯಾಪಾರದಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ. ರಥ ಬೀದಿಯಲ್ಲಿ ನಡೆಯುವ ವಿಟ್ಲಪಿಂಡಿ ಮಹೋತ್ಸವ ಅಥವಾ ಕೃಷ್ಣ ಲೀಲೋತ್ಸವಕ್ಕೆ ತಯಾರಿಗಳು ಮುಗಿದಿವೆ.
ಉಡುಪಿಯ ಅಷ್ಟಮಿ ಅಂದರೆ ಅಲ್ಲಿ ಹುಲಿ ವೇಷ ಸಹಿತ ಅನೇಕ ವೇಷದಾರಿಗಳ ಆರ್ಭಟ ಇರುತ್ತೆ. ಈ ಬಾರಿ ನೂರಕ್ಕೂ ಅಧಿಕ ಹುಲಿ ವೇಷ ತಂಡಗಳು ಹಬ್ಬಕ್ಕೆ ಹೊಸ ಹುರುಪು ನೀಡಲಿವೆ. ಅರ್ಘ್ಯ ಪ್ರಧಾನದ ವೇಳೆ ಕೃಷ್ಣ ದೇವರಿಗೆ ಅರ್ಪಿಸಲು ಹಾಗೂ ನಂತರ ಭಕ್ತರಿಗೆ ವಿತರಿಸಲು 40 ಸಾವಿರ ಚಕ್ಕುಲಿಗಳು ಸಿದ್ಧವಾಗುತ್ತಿದೆ.








