ಉಡುಪಿ : ರಾಜ್ಯದಲ್ಲಿ ಭಾರೀ ಸದ್ದು ಹಾಗೂ ಆಕ್ರೋಶಕ್ಕೆ ಕಾರಣವಾಗಿರುವ ಉಡುಪಿ ಖಾಸಗಿ ಕಾಲೇಜಿನಲ್ಲಿ ನಡೆದಿದ್ದ ವಿಡಿಯೋ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿದೆ.
ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನಲ್ಲಿನ ಟಾಯ್ಲೆಟ್ ನಲ್ಲಿ ಮೊಬೈಲ್ ಇರಿಸಿ ಹಿಂದೂ ಯುವತಿಯ ವಿಡೀಯೋ ಚಿತ್ರಿಕರಿಸಿದ್ದರು. ಈ ವಿಚಾರವಾಗಿ ಕಾಲೇಜಿನ ಆಡಳಿತ ಮಂಡಳಿ ಮಂಡಳಿ ವಿದ್ಯಾರ್ಥಿನಿಯರಿಗೆ ಎಚ್ಚರಿಕೆ ನೀಡಿ ಕ್ರಮ ಕೈಗೊಂಡಿತ್ತು. ನಂತರ ಈ ಕುರಿತು ಮಾಹಿತಿ ಹೊರಗೆ ಬರುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಈ ಕುರಿತು ಜು.26ರಂದು ಸುಮೋಟೋ ಕೇಸ್ ದಾಖಲಾಗಿತ್ತು.
ರಾಜ್ಯಾದ್ಯಂತ ಬಿಜೆಪಿ, ಎಬಿವಿಪಿ ಹಾಗೂ ಹಿಂದೂಪರ ಸಂಘಟನೆಗಳು ಘಟನೆಯನ್ನು ಖಂಡಿಸಿ ಭಾರೀ ಪ್ರತಿಭಟನೆ ನಡೆಸಿದ್ದವು. ಈ ಪ್ರಕರಣವನ್ನು ಎಸ್ ಐಟಿ ತನಿಖೆಗೆ ವಹಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿತ್ತು. ಈಗ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿ ಆದೇಶ ಹೊರಡಿಸಿದೆ








