ತ್ರೀವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು
ಮೈಸೂರು: ಮೈಸೂರಿನಲ್ಲಿ ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಜನರು ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದಾರೆ. ಹಾಗೇ ತ್ರಿವೇಣಿ ಸಂಗಮದಲ್ಲಿ ಜನರು ಪುಣ್ಯಸ್ನಾನ ಮಾಡಿ ಗಂಗಾಮಾತೆಗೆ ನಮನ ಸಲ್ಲಿಸುತ್ತಿದ್ದಾರೆ.
ತಿ.ನರಸೀಪುರ ತಾಲೂಕಿನ ತ್ರಿವೇಣಿ ಸಂಗಮಕ್ಕ ಭಕ್ತ ಸಾಗರ ಹರಿದುಬಂದಿದ್ದು ನದಿಯಲ್ಲಿ ಭಕ್ತಾದಿಗಳು ಮಿಂದೇಳುತ್ತಿದ್ದಾರೆ. ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಗುಂಜನರಸಿಂಹ ದೇವರ ದರ್ಶನ ಪಡೆಯುತ್ತಿದ್ದಾರೆ.
ಕಳೆದ ರಡು ವರ್ಷಗಳಿಂದ ಕೊರೊನಾ ಕಾರಣ ತ್ರೀವೇಣಿ ಸಂಗಮದಲ್ಲಿ ಪಣ್ಯಸ್ನಾನಕ್ಕೆ ನಿರ್ಭಂದಿಸಲಾಗಿತ್ತು. ಸಧ್ಯ ಕೊರೊನಾ ಕಡಡಿಮೆಯಾಗಿದ್ದು, ಪಣ್ಯಸ್ನಾಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಿವಿಧ ಗ್ರಾಮದ ದೇವರ ವಿಗ್ರಹಗಳನ್ನ ತಂದು ಪೂಜೆ ಸಲ್ಲಿಸುವುದು ಇಲ್ಲಿನ ಸಂಪ್ರದಾಯ. ಯುಗಾದಿಯ ಈ ಸಂದರ್ಭದಲ್ಲಿ ಕಪ್ಪಡಿ ಜಾತ್ರೆ, ಬೋಪ್ಪೆಗೌಡನಪುರ ಮಠಕ್ಕೆ ಭೇಟಿ ನೀಡಿ, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಭಕ್ತರು ಮನೆಗೆ ತೆರಳುವುದು ಇಲ್ಲಿನ ವಾಡಿಕೆ.
ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಭಾಗದಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದು, ತಾಲೂಕು ಆಡಳಿತದ ವತಿಯಿಂದ ತಾತ್ಕಾಲಿಕ ಸ್ನಾನದ ಕೊಠಡಿ ಹಾಗೂ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಜತೆಗೆ ಮುಂಜಾಗೃತ ಕ್ರಮವಾಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.








