Ugadi: ಯುಗಾದಿ ಹಬ್ಬದಂದು ಉದ್ಬವ ಲಿಂಗಕ್ಕೆ ಹೊಂಗಿರಣ ಸ್ಪರ್ಶ

1 min read
Raichuru Saaksha Tv

ಯುಗಾದಿ ಹಬ್ಬದಂದು ಉದ್ಬವ ಲಿಂಗಕ್ಕೆ ಹೊಂಗಿರಣ ಸ್ಪರ್ಶ

ರಾಯಚೂರು: ಯುಗಾದಿ ಹಬ್ಬ ಭಾರತೀಯರ ಪಾಲಿಗೆ ಹೊಸ ವರ್ಷದ ಮೊದಲ ದಿನ. ಇಂದು ನಾಡಿನ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನೆರವೇರುತ್ತಿವೆ. ಇಂದು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಮಾರಟೇಶ್ವರ ದೇವಾಲಯದ ಉದ್ಬವ ಲಿಂಗಕ್ಕೆ ಸೂರ್ಯ ರಶ್ಮಿ ನೇರವಾಗಿ ಬೀಳುತ್ತದೆ.

ಯುಗಾದಿ ಹಬ್ಬದ ಸಂದರ್ಭದಲ್ಲಿ  ಯುಗಾದಿ ಸಂದರ್ಭದಲ್ಲಿ ಎರಡು ಮೂರುದಿನಗಳ ಕಾಲ ಸೂರ್ಯ ರಶ್ಮಿ ಲಿಂಗದ ಮೇಲೆ ಬೀಳುತ್ತದೆ. ಆದರೆ ಹಬ್ಬದ ದಿನ ಮಾತ್ರ ಸೂರ್ಯೋದಯವಾಗುತ್ತಿದ್ದಂತೆ ನೇರವಾಗಿ ಹೊಂಗಿರಣಗಳು ಲಿಂಗದ ಮೇಲೆ ಬೀಳುತ್ತದೆ. ಹೀಗಾಗಿ ಈ ವಿಶೇಷ ದಿನದಂದು ಜಿಲ್ಲೆಯ ಭಕ್ತರು ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ.

Raichuru Saaksha Tv

ಈ ದೇವಸ್ಥಾನವನ್ನು 7ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಎರಡನೇ ಶ್ರೀಶೈಲ ಅಂತಲೂ ಕರೆಯುತ್ತಾರೆ.  ಸೂರ್ಯನ ಚಲನೆ ಆಧಾರದ ಮೇಲೆ ನಿರ್ಮಿಸಲಾಗಿರುವ ವಿಶಿಷ್ಟ ವಾಸ್ತುಶಿಲ್ಪ ಹೊಂದಿರುವ ಈ ದೇವಾಲಯ ಪ್ರತಿವರ್ಷ ಯುಗಾದಿಯ ದಿನ ಈ ಅಚ್ಚರಿಗೆ ಕಾರಣವಾಗುತ್ತಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd