ಉಕ್ರೇನ್ ಬಿಕ್ಕಟ್ಟು: ಮರಿಯಾಪೋಲ್ ಆಸ್ಪತ್ರೆ ರಷ್ಯಾ ವಶಕ್ಕೆ – 400 ಮಂದಿ ಒತ್ತೆಯಾಳು
ರಷ್ಯಾ-ಉಕ್ರೇನ್ ನಡುವಿನ ಯುದ್ಧ 21ನೇ ದಿನಕ್ಕೆ ಕಾಲಿಟ್ಟಿದೆ. ಯುದ್ಧ ನಿಲ್ಲುವ ಯಾವ ಲಕ್ಷಣಗಳೂ ಲ್ಲಿಯವರೆಗೆ ಗೋಚರಿಸುತ್ತಿಲ್ಲ. ಮಾರಿಯುಪೋಲ್ ನಲ್ಲಿರುವ ಆಸ್ಪತ್ರೆಯನ್ನು ರಷ್ಯಾ ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದು, ಆಸ್ಪತ್ರೆಯಲ್ಲಿದ್ದ 400 ಮಂದಿಯನ್ನು ಒತ್ತೆಯಾಳುಗಳಾಗಿರಿಸಿಕೊಂಡಿದೆ.
ಮಾರಿಯುಪೋಲ್‌ನಲ್ಲಿರುವ ಅತಿದೊಡ್ಡ ಆಸ್ಪತ್ರೆಯನ್ನು, ವೈದ್ಯರು ಮತ್ತು ರೋಗಿಗಳು ಸೇರಿದಂತೆ 400 ಜನರನ್ನು ರಷ್ಯಾದ ಪಡೆಗಳು ಒತ್ತೆಯಾಳಾಗಿಸಿಕೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ. ಅವರನ್ನು ಹೊರಗೆ ಹೋಗಲು ಬಿಡುತ್ತಿಲ್ಲ ಎಂದು ಉಕ್ರೇನ್ ಆರೋಪಿಸಿದೆ.
ಮಾಕ್ಸರ್ ಒದಗಿಸಿದ ಉಪಗ್ರಹ ಚಿತ್ರಗಳು ಮಾರ್ಚ್ 9 ರಂದು ದಾಳಿಯ ಮೊದಲು ಮತ್ತು ನಂತರ ಮಾರ್ಚ್ 12 ರಂದು ದಾಳಿಯ ನಂತರ ಮಕ್ಕಳ ಆಸ್ಪತ್ರೆ ಮತ್ತು ವೈದ್ಯಕೀಯ ಕಟ್ಟಡಗಳನ್ನು ತೋರಿಸುತ್ತಿದ್ದು, ದಾಳಿ ಬಳಿಕ ಕಟ್ಟಡಕ್ಕಾದ ಹಾನಿಯನ್ನು ತೋರಿಸುತ್ತಿದೆ.
ಉಕ್ರೇನಿಯನ್ ನಗರಗಳಲ್ಲಿ ರಷ್ಯಾ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿದ್ದು, ದಾಳಿಯ ಮಧ್ಯೆ ಹಲವು ಭಾರತೀಯರು ಸಿಕ್ಕಿಬಿದ್ದಿದ್ದರು. ಅವರನ್ನು ರಷ್ಯಾದ ನಗರಗಳ ಮೂಲಕ ಮರಳಿ ಕರೆ ತರಲಾಗುತ್ತಿದೆ. ಖೆರ್ಸನ್‌ನಲ್ಲಿ ಸಿಲುಕಿರುವ 3 ಭಾರತೀಯರನ್ನು ಸಿಮ್ಫೆರೋಪೋಲ್ ಮತ್ತು ಮಾಸ್ಕೋ ಮೂಲಕ ಸ್ಥಳಾಂತರಿಸಲಾಯಿತು.








