Ukraine – Russia War – ಯುದ್ಧ ನಡೆಸೋ ಅವಶ್ಯಕತೆ ಏನಿತ್ತು..?? ಯುದ್ಧದ ಹಿನ್ನೆಲೆ ಏನು..??
2022 ರ ಮೊದಲ ವಾರದಿಂದಲೇ ಯೂರೋಪ್ ನಲ್ಲಿ ಯುದ್ಧ ಭೀತಿ ಶುರುವಾಗಿತ್ತು.. ಇದೀಗ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದ್ದು , ಉಕ್ರೇನ್ ಪರಿಸ್ಥಿತಿಗೆ ವಿಶ್ವ ಮರುಕ ವ್ಯಕ್ತಪಡಿಸುತ್ತಿದೆ.
ಸಾವಿರಾರು ಉಕ್ರೇನಿನ್ ಜನರ ಜೀವ ಹೋಗಿದೆ.. ಭಾರತದ ಇಬ್ಬರು ಜೀವ ಕಳೆದುಕೊಮಡಿದದ್ದಾರೆ.. ಈ ಪೈಕಿ ಓರ್ವ ಕರ್ನಾಟಕದ ಹಾವೇರಿ ಮೂಲದ ನವೀನ್ ಆಗಿದ್ದರು.. ಯುದ್ಧ ಪೀಡಿತ ದೇಶದಿಂದ ಭಾರತೀಯರನ್ನ ಮರಳಿ ತಾಯ್ನಾಡಿಗೆ ಕರೆತರಲು ಕೇಂದ್ರ ಆಪರೇಷನ್ ಗಂಗಾ ಯೋಜನೆಯಡಿ ಏರ್ ಲಿಫ್ಟಿಂಗ್ ಪ್ರಯತ್ನದಲ್ಲಿದ್ದು , ಈಗಾಗಲೇ ಸಾವಿರಾರು ವಿದ್ಯಾರ್ಥಿಗಳನ್ನ ಏರ್ ಲಿಫ್ಟಿಂಗ್ ಮಾಡಲಾಗಿದೆ..
ಮತ್ತೊಂದೆಡೆ ನಿನ್ನೆ ರಷ್ಯಾ ಮಾನವೀಯತಾ ದೃಷ್ಟಿಯಿಂದ 2 ಪ್ರಮುಖ ನಗರಗಳಲ್ಲಿ ಕದನ ವಿರಾಮ ಘೋಷಣೆ ಮಾಡಿದೆ. NATO ಸಹಾಯದ ನಿರೀಕ್ಷೆಯಲ್ಲಿದ್ದ ಉಕ್ರೇನ್ ಗೆ , ರಷ್ಯಾ ಭಯದಿಂದ ಸಹಾಯ ಮಾಡಲು ನಿರಾಕರಿಸಿ ನ್ಯಾಟೋ ಕೈಕೊಟ್ಟಿದೆ.. ಮತ್ತೊಂದೆಡೆ ಅಮೆರಿಕಾ ಕೂಡ ಉಕ್ರೇನ್ ಕೈಬಿಟ್ಟಿದೆ.. ಪುಟ್ಟ ರಾಷ್ಟ್ರ ವಿಶ್ವದ ಬಲಿಷ್ಠ ರಾಷ್ಟ್ರವಾದ ರಷ್ಯಾ ವಿರುದ್ಧ ಏಕಾಂಗಿಯಾಗಿಯೇ ವಹೋರಾಡ್ತಿದ್ದರು.. ವಿಶ್ವದ ಹಲವು ದೇಶಗಳು ರಾಜತಾಂತ್ರಿಕವಾಗಿ , ವಾಣಿಜ್ಯವಾಗಿ ಬೇರೆ ಬೇರೆ ರೀತಿಯಲ್ಲಿ ರಷ್ಯಾಗೆ ಹೊಡೆತ ನೀಡಿವೆ.
ಮತ್ತೊಂದೆಡೆ ಈ ಯುದ್ಧದ ಭೀಕರತೆ ನೋಡಿದರೆ , ಜಾಗತಿಕ ಯುದ್ಧ ಅಂದ್ರೆ ವರ್ಲ್ಡ್ ವಾರ್ ಗೆ ನಾಂದಿಯಾಗುತ್ತಾ ಅನ್ನೋ ಆತಂಕವೂ ವಿಶ್ವದ ಜನರನ್ನ ಕಾಡುತ್ತಿದೆ.
ಇತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಾರ್ ಪುಟಿನ್ ಅವರು ತಮ್ಮ ಬೇಡಿಕೆ ಈಡೇರಿಕೆಗೆ ಒಪ್ಪಿದ್ರೆ ಮಾತುಕಥೆಗೆ ಸಿದ್ಧ ಎಂದಿದ್ದಾರೆ..
ಯುದ್ಧ ನಡೆಸೋ ಅವಶ್ಯಕತೆ ಏನಿತ್ತು..?? ಯುದ್ಧದ ಹಿನ್ನೆಲೆ ಏನು..??
ಅಂದ್ಹಾಗೆ ಸೋವಿಯತ್ ಗಣರಾಜ್ಯವಾದ ಭಾಗವಾಗಿದ್ದ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ಶತಮಾನಗಳದ್ದು.. ಅನೇಕ ವರ್ಷಗಳಿಂದ ಎರೆಡೂ ದೇಶಗಳ ನಡುವಿನ ಪರರಿಸ್ಥಿತಿ ಉತ್ತಮವಾಗಿರಲಿಲ್ಲ.. ಆದ್ರೆ 2021 ರ ಆರಂಭಿಕ ದಿನಗಳಲ್ಲಿ ಎರಡೂ ದೇಶಗಳ ನಡುವಿನ ಪರಿಸ್ಥಿತಿ ಹದಗೆಟ್ಟಿತು. ಕಳೆದ ವರ್ಷ ಜನವರಿ ತಿಂಗಳಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಕ್ರೇನ್ ನ್ಯಾಟೋಗೆ ಸೇರಲು ಅವಕಾಶ ನೀಡುವಂತೆ ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರನ್ನು ಒತ್ತಾಯಿಸಿದ್ದರು
ಇದು ರಷ್ಯಾವನ್ನ ಕೆರಳಿಸಿತು. ಆಗಿನಿಂದಲೇ ಯುದ್ಧಕ್ಕೆ ತಯಾರಿ ನಡೆಸಿದ ರಷ್ಯಾ ತನ್ನ ಸೇನೆಯನ್ನ ಶಸ್ತ್ರಾಭ್ಯಾಸಕ್ಕಾಗಿ ಕಳುಹಿಸಲು ಆರಂಭಿಸಿತ್ತು. ಆಗ ಅಮೆರಿಕಾ ಮಧ್ಯ ಪ್ರವೇಶಿಸಿ ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿದರೆ ತೀವ್ರ ನಿರ್ಬಂಧಗಳನ್ನ ಹೇರಬೇಕಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಬಿಡೆನ್ ಎಚ್ಚರಿಕೆ ನೀಡಿದರು. ಇದು ರಷ್ಯಾದ ಅಧ್ಯಕ್ಷ ವ್ಲಾಡಿಮಾರ್ ಪುಟಿನ್ ಅವರನ್ನ ಮತ್ತಷ್ಟು ಕೆರಳಿಸಿತು..
ಹೀಗೆ ಹಂತಹಂತವಾಗಿ ಪರಿಸ್ಥಿತಿ ಕೈಮೀರುತ್ತಲೇ ಕಡೆಗೆ ರಷ್ಯಾ ಏಕದಮ್ ಆಗಿ ಯುದ್ಧ ಘೋಷಣೆ ಮಾಡಿತು.. ರಷ್ಯಾ ಯುದ್ಧ ಮಾಡುತ್ತೆ ಅನ್ನೋದನ್ನ ಯಾರೂ ಕೂಡ ಊಹೆ ಮಾಡಿರಲಿಲ್ಲ.. ಆದ್ರೆ ಉಕ್ರೇನ್ ಅಮೆರಿಕಾವನ್ನೇ ನಂಬಿಕೊಂಡಿತ್ತು.. ಅಮೆರಿಕಾ ಕೊನೆ ಹಂತದಲ್ಲೂ ನಮಗೂ ಉಕ್ರೇನ್ ಗೂ ರಷ್ಯಾಗೂ ಯಾವುದೇ ಸಂಬಂಧವಿಲ್ಲ ಅನ್ನುವಂತೆ ಉಕ್ರೇನ್ ನ ಕೈಬಿಟ್ಟು ಇದೀಗ ದೂರದಿಂದಲೇ ಯುದ್ಧ ನೋಡುತ್ತಿದೆ..
ಆದರೆ ಅಮೆರಿಕಾ ರಷ್ಯಾ ವಿರುದ್ಧ ಇತರೇ ಪಾಶ್ಚಿಮಾತ್ಯ ದೇಶಗಳ ಜೊತೆಗೂಡಿ ಬಾಹ್ಯವಾಗಿ ಹೋರಾಡುತ್ತಾ ರಷ್ಯಾಗೆ ಸಂಕಷ್ಟಗಳನ್ನ ತಂದೊಡ್ಡುವ ಪ್ರಯತ್ನಗಳನ್ನ ಮಾಡುತ್ತಿದೆ..