Ukraine – Russia War : ರಷ್ಯಾ ಮೂಲದ ಹೂಡಿಕೆದಾರರಿಗೆ ವಾಸಿಸಲು ನಿರ್ಬಂಧ ಹೇರಿದ ಗ್ರೀಸ್
ರಷ್ಯಾ ಉಕ್ರೇನ್ ಮೇಲೆ ನಡೆಸಿರುವ ದಾಳಿಯನ್ನ ಅಮೆರಿಕಾ ಸೇರಿದಂತೆ ಹಲವು ದೇಶಗಳು ತೀವ್ರವಾಗಿ ಖಂಡಿಸಿವೆ.. ಗ್ರೀಸ್ ಕೂಡ ರಷ್ಯಾ ವಿರುದ್ಧವಿದ್ದು , ಇದೀಗ ರಷ್ಯಾ ಮೂಲದ ಹೂಡಿಕೆದಾರರಿಗೆ ನಿರ್ಬಂಧ ಹೇರಲು ಮುಂದಾಗಿದೆ.
ಗ್ರೀಸ್‌ನಲ್ಲಿ ಬಂಡವಾಳ ಹೂಡಿಕೆ ಮಾಡಲು ಬಯಸುವ ರಷ್ಯನ್ನರಿಗೆ ವಾಸಿಸಲು ನೀಡುವ ಪರವಾನಗಿಯನ್ನು ಸ್ಥಗಿತಗೊಳಿಸಲಾಗಿದೆ. ಹೌದು.. ಮುಂದಿನ ಸೂಚನೆವರೆಗೂ ಈ ಆದೇಶ ಜಾರಿಯಲ್ಲಿರಲಿದೆ ಎಂದು ರಷ್ಯಾ ಸರ್ಕಾರ ತಿಳಿಸಿದೆ.. ಈ ಮೂಲಕ ರಷ್ಯಾ ನಡೆಯನ್ನ ತೀವ್ರವಾಗಿ ಖಂಡಿಸಿದೆ. ಉಕ್ರೇನ್ ಗೆ ಪರೋಕ್ಷ ಬೆಂಬಲ ಸೂಚಿಸಿದೆ.
ಈ ನಿರ್ಧಾರವು ಪ್ರಸ್ತುತ ಪರಿಗಣಿಸಲ್ಪಡುತ್ತಿರುವ ಹಾಗೂ ಹೊಸ ಪರವಾನಗಿ ಅರ್ಜಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಸಚಿವಾಲಯ ಹೇಳಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಅಂದ್ರೆ ಫೆಬ್ರವರಿ 24 ರಂದು ಉಕ್ರೇನ್ ಮೇಲೆ ಯುದ್ಧ ಸಾರಿದ್ದು , ಪ್ರಸ್ತುತ ಉಕ್ರೇನ್ ಕಾದ ಕೆಂಡವಾಗಿದೆ.. ಅಲ್ಲಿನ ನಾಗರಿಕರ ಪರಿಸ್ಥಿತಿ ಶೋಚನೀಯವಾಗಿದೆ… ಉಕ್ರೇನ್ ನಲ್ಲಿ ಭಾರತೀಯರೂ ಸಿಲುಕಿದ್ದು , ಭಾರತ ಸರ್ಕಾರ ಅವರನ್ನ ಕರೆತರುವ ಪ್ರಯತ್ನದಲ್ಲಿದೆ.