Ukraine – Russia War : 5500 ರಷ್ಯಾದ ಸೈನಿಕರ ಹತ್ಯೆಗೈದ ಬಗ್ಗೆ ಉಕ್ರೇನ್ ಸಚಿವಾಲಯ ಮಾಹಿತಿ
ರಷ್ಯಾ ಉಕ್ರೇನ್ ಮೇಲೆ ನಡೆಸಿರುವ ದಾಳಿಯನ್ನ ಅಮೆರಿಕಾ ಸೇರಿದಂತೆ ಹಲವು ದೇಶಗಳು ತೀವ್ರವಾಗಿ ಖಂಡಿಸಿವೆ.. 4 ದಿನಗಳ ಉಕ್ರೇನ್ ರಷ್ಯಾ ನಡುವಿನ ಯುದ್ಧದಲ್ಲಿ ರಷ್ಯಾದ 5,500 ಸೈನಿಕರನ್ನು ಉಕ್ರೇನ್ ಸೈನಿಕರು ಹತ್ಯೆಗೈದಿರೋದಾಗಿ ಉಕ್ರೇನ್ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ ಎಂದು ವರದಿಯಾಗಿದೆ.. ಸುಮಾರು 5500 ರಷ್ಯಾದ ಸೈನಿಕರ ಹತ್ಯೆ ಮಾಡಲಾಗಿದ್ದು , 191 ರಷ್ಯಾದ ಟ್ಯಾಂಕ್ ಗಳು, 29 ಫೈಟರ್ ವಿಮಾನಗಳು, 29 ಹೆಲಿಕಾಪ್ಟರ್‌ಗಳು ಮತ್ತು 816 ಶಸ್ತ್ರಸಜ್ಜಿತ ಸಿಬ್ಬಂದಿ ವಾಹನಗಳನ್ನು ಉಕ್ರೇನ್ ಪಡೆಗಳು ನಾಶ ಮಾಡಿವೆ ಎಂದು ವರದಿಯಾಗಿದೆ.
ಸಾವುನೋವುಗಳ ಕುರಿತು ಅಧಿಕಾರಿಗಳು ನಿಖರವಾದ ಅಂಕಿಅಂಶವನ್ನು ನೀಡದಿದ್ದರೂ ಕೂಡ, ತನ್ನ ಪಡೆಗಳು ನಷ್ಟವನ್ನು ಅನುಭವಿಸಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವು ಭಾನುವಾರದಂದು ಪರೋಕ್ಷವಾಗಿ ಒಪ್ಪಿಕೊಂಡಿತ್ತು.. ರಷ್ಯಾದ ಆಕ್ರಮಣ ಆರಂಭವಾದ ಮೊಲದ ನಾಲ್ಕು ದಿನಗಳಲ್ಲಿ ಉಕ್ರೇನ್‌ನ 94 ನಾಗರಿಕರು ಮೃತಪಟ್ಟು, 354 ಜನ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮೇಲ್ವಿಚಾರಣಾ ತಂಡ ಸೋಮವಾರ ಖಚಿತಪಡಿಸಿದೆ.