ಯುದ್ಧ ಪೀಡಿತ ಉಕ್ರೇನ್ ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಪರದಾಟ ಮುಂದುವರೆದಿದೆ.. ತಮ್ಮ ಸಂಕಷ್ಟದ ಬಗ್ಗೆ ಕರ್ನಾಟಕ ಮೂಲದ ವಿದ್ಯಾರ್ಥಿ ಯಶವಂತರೆಡ್ಡಿ ವಿಡಿಯೋ ಹರಿಬಿಟ್ಟಿದ್ದಾರೆ.
ನಿನ್ನೆ 200ಕ್ಕು ಕರ್ನಾಟಕದ ವಿದ್ಯಾರ್ಥಿಗಳು ಮತ್ತು 1500 ಭಾರತೀಯ ವಿದ್ಯಾರ್ಥಿಗಳು ಖಾರ್ಕಿವ್ ನಿಂದ ತೆರಳಿಬೇಕಿತ್ತು.
ಅದರೇ ನಮಗೆ ಅಲ್ಲಿಂದ ಹೊರಡಲು ಟ್ರೈನ್ ಸಿಗಲಿಲ್ಲ. ಮದ್ಯಾಹ್ನ 3ಕ್ಕೆ ಭಾರತದ ರಾಯಭಾರಿ ಕಚೇರಿಯಿಂದ ಒಂದು ಸಂದೇಶ ಬಂತು. ಸಂಜೆ 6ರೊಳಗೆ ಖಾರ್ಕಿವ್ ಸಿಟಿಯಿಂದ ಹೊರ ಹೋಗಿ ಅಂತಾ.
ಅದರೇ ಯಾವುದೇ ವಾಹನ ಸೌಲಭ್ಯ ಇರಲಿಲ್ಲ. ಹಾಗಾಗಿ ನಾವೂ ಅಲ್ಲಿಂದ ನಡೆದುಕೊಂಡೆ ಹೊರಟೆವು. ಪಿಶಾಷಿನ್ ಎಂಬ ಊರಿಗೆ ಹೋಗೊದಕ್ಕೆ ತಿಳಿಸಿದ್ರು. ಕಾರ್ಕಿವ್ ನಿಂದ ಪಿಶಾಷಿನ್ ಎಂಬ ಊರಿಗೆ 25 ಕಿಮೀ ನಡೆದುಕೊಂಡೆ ಬಂದಿದ್ದೇವೆ. ನಮಗೆ ಎರಡ್ಮೂರು ದಿನಗಳಿಂದ ಊಟವಿಲ್ಲ.
ಬಿಸ್ಕೇಟ್ ತಿಂದು ಕಾಲ ಕಳೆಯುತ್ತಿದ್ದೇವೆ. ತುಂಬಾ ವಿದ್ಯಾರ್ಥಿಗಳು ಇಲ್ಲೇ ಇದ್ದೇವೆ. ಅದಷ್ಟು ಬೇಗ ನಮ್ಮನ್ನ ಭಾರತಕ್ಕೆ ಕೆರೆಸಿಕೊಳ್ಳೋ ಕೆಲಸವಾಗಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.