ಆರು ಮಾನವೀಯ ಕಾರಿಡಾರ್‌ಗಳನ್ನು ತೆರೆಯಲು ಮುಂದಾದ ಉಕ್ರೇನ್ – Saaksha Tv
ಉಕ್ರೇನ್: ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಶುರುವಾಗಿ ಇಂದಿಗೆ 16 ದಿನಗಳಾದವು. ಈ ಮಧ್ಯೆ ಉಕ್ರೇನ್ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಾಳಾಂತರಿಸಲು ದೇಶವು ಇನ್ನೂ ಆರು ಮಾನವೀಯ ಕಾರಿಡಾರ್‌ಗಳನ್ನು ತೆರೆಯಲು ತಯಾರಿ ನಡೆಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ರಷ್ಯಾ ನಡೆಸಿದ ದಾಳಿಯಿಂದ ಎಷ್ಟೋ ಜನರು ವಸತಿ ಕಳೆದುಕೊಂಡಿದ್ದಾರೆ. ಮಕ್ಕಳು ಅನಾಥವಾಗುತ್ತಿವೆ. ಆಹಾರ – ನೀರು ಇಲ್ಲದೇ ಲಕ್ಷಾಂತರ ಜನ ನರಳಾಡುತ್ತಿದ್ದಾರೆ. ಇದರಿಂದ ಕಂಗೆಟ್ಟ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ತನ್ನ ಪ್ರಜೆಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಅವರು ಇತ್ತೀಚಿನ ವಿಡಿಯೋ ಭಾಷಣದಲ್ಲಿ ಹೇಳಿರುವ ಪ್ರಕಾರ ಸುಮಿ, ಕೀವ್ ಮತ್ತು ಎನರ್ಗೋಡರ್ ನಗರಗಳಿಂದ ನಾವು ಮೂರು ಮಾನವೀಯ ಕಾರಿಡಾರ್‌ಗಳ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಕಾರಿಡಾರ್ಗಳಿಂದ ಸುಮಾರು 35,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲು ಅನುಕೂಲವಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.
ನಾವು ಆರು ಕಾರಿಡಾರ್‌ಗಳನ್ನು ತೆರೆಯಲು ತಯಾರಿ ನಡೆಸುತ್ತಿದ್ದೇವೆ. ಜನರನ್ನು ಮಾರಿಯುಪೋಲ್, ಇಝಿಯುಮ್, ವೊಲ್ನೋವಾಖಾದಿಂದ ಸ್ಥಳಾಂತರಿಸಬೇಕೆಂದು ನಾವು ಪ್ರಾರ್ಥಿಸುತ್ತೇವೆ. ನಮ್ಮ ಉಕ್ರೇನ್‌ನ ಸುರಕ್ಷಿತ ನಗರಗಳಿಗೆ ಅವರನ್ನು ಕರೆದೊಯ್ಯಲು ನಾವು ಯೋಜಿಸುತ್ತೇವೆ ಎಂದು ಉಕ್ರೇನ್ ಅಧ್ಯಕ್ಷರು ಹೇಳಿದರು.








