Ukraine vs russia war | ಯುದ್ಧದಲ್ಲೂ ಒಂದಾದ ಉಕ್ರೇನ್-ಭಾರತದ ಜೋಡಿ
ರಷ್ಯಾ ಸೈನಿಕರು ಉಕ್ರೇನ್ ಮೇಲೆ ಯುದ್ಧ ಸಾರಿ ಇಂದಿಗೆ 7 ದಿನಗಳು ಕಳೆದಿವೆ.
ಈ ಯುದ್ಧದಲ್ಲಿ ರಷ್ಯಾದ ಕ್ರೌರ್ಯಕ್ಕೆ ಉಕ್ರೇನ್ ತತ್ತರಿಸಿ ಹೋಗಿದೆ. ರಷ್ಯಾದ ಈ ನಡೆಗೆ ವಿಶ್ವದಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ.
ಈ ಮಧ್ಯೆ ಹೈದರಾಬಾದ್‌ನಲ್ಲಿ ನಡೆದ ಆರಕ್ಷತೆ ಸಮಾರಂಭವೊಂದರಲ್ಲಿ, ಅರ್ಚಕರು ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಇದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಅಂದಹಾಗೆ ಇಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋದು ಉಕ್ರೇನ್ ಮೂಲದ ವಧು ಮತ್ತು ಹೈದರಾಬಾದ್ ಮೂಲದ ವರ.
ಹೀಗಾಗಿ ಅರ್ಚಕರು, ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಂಡು ಶಾಂತಿ ಮರುಸ್ಥಾಪನೆಯಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಪ್ರತೀಕ್ ಮತ್ತು ಲ್ಯುಬೊವ್ ಉಕ್ರೇನ್‌ನಲ್ಲಿ ಮದುವೆಯಾಗಿದ್ದರು. ಆರಕ್ಷತೆಗಾಗಿ ಹೈದರಾಬಾದ್‌ಗೆ ಬಂದ ಮರುದಿನವೇ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿತ್ತು.








