Ukraine : ಅಫ್ಗಾನಿಸ್ತಾನದ ಅಧ್ಯಕ್ಷರಂತೆ ಓಡಿಹೋಗಿಲ್ಲ ಝೆಲೆಂಕ್ಸಿ….
ರಷ್ಯಾ ಉಕ್ರೇನ್ ಮೇಲೆ ಸಾರಿರುವ ಯುದ್ಧ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ… ರಷ್ಯಾ ನಡೆಯನ್ನ ಅಮೆರಿಕಾ ಸೇರಿದಂತೆ ಅನೇಕ ದೇಶಗಳು ಖಂಡಿಸಿವೆ.. ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಅವರದ್ದೇ ದೇಶದ ಜನರು ಮುಗಿಬಿದ್ದಿದ್ದು ಸಾವಿರಾರು ಜನರು ಉಕ್ರೇನ್ ವಿರುದ್ಧದ ದಾಳಿಯನ್ನ ವಿರೋಧಿಸಿ ಪ್ರತಿಭಟಿಸಿದ್ದಾರೆ..
ಇತ್ತ ಉಕ್ರೇನ್ ರಷ್ಯಾ ದಾಳಿಗೆ ಸಂಪೂರ್ಣ ನಲುಗಿ ಹೋಗಿದೆ… ಅಲ್ಲಿನ ಸ್ಥಿತಿ ಭೀಭತ್ಸವಾಗಿದೆ.. ಭಾರತೀಯರೂ ಅಲ್ಲಿ ಸಿಇಲುಕಿ ಪರದಾಡ್ತಿದ್ದಾರೆ… ಭಾರತದ ಇಬ್ಬರೂ ಈಗಾಗಲೇ ದಾಳಿಯಲ್ಲಿ ಜೀವ ಬಿಟ್ಟಿದ್ದಾರೆ.. ಅದ್ರಲ್ಲಿ ನಮ್ಮ ಕರುನಾಡಿನ ಕುಡಿ ನವೀನ್ ಕೂಡ ಒಬ್ಬರು.
ಕಳೆದ ಬುಧವಾರ ಏಕ್ ದಮ್ ಆಗಿ ರಷ್ಯಾ ಉಕ್ರೇನ್ ವಿರುದ್ಧ ಸಮರ ಸಾರಿ ಬಿಟ್ಟಿತ್ತು… ಆದ್ರೆ ಅಮೆರಿಕಾ ಸಹಾಯದ ನಂಬಿಕೆಯಲ್ಲಿ ರಷ್ಯಾ ವಿರುದ್ಧ ಎದೆಯೊಡ್ಡಿದ್ದ ಉಕ್ರೇನ್ ಗೆ ಅಮೆರಿಕಾ ಕೊನೆ ಕ್ಷಣದಲ್ಲಿ ಮೋಸ ಮಾಡಿತ್ತು.. ಇದ್ರಿಂದಾಗಿ ರಷ್ಯಾದಂತ ದೊಡ್ಡ ದೇಶದ ಜೊತೆಗೆ ಪುಟ್ಟ ರಾಷ್ಟ್ರ ಉಕ್ರೇನ್ ಶಕ್ತಿ ಮೀರಿ ಹೊಡೆದಾಡ್ತಿದೆ..
ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.. ಎರೆಡೂ ದೇಶಗಳ ನೂರಾರು ಸೈನಿಕರು ಜೀವ ತ್ಯಾಗ ಮಾಡಿದ್ದಾರೆ. ದಶಕಗಳಲ್ಲಿ ಯುರೋಪಿಯನ್ ನೆಲದಲ್ಲಿ ಅತಿದೊಡ್ಡ ಮಿಲಿಟರಿ ಸಂಘರ್ಷ ಎಂದೇ ಇದನ್ನ ವಿಶ್ಲೇಷಿಸಲಾಗ್ತಿದೆ.
ಒಂದೆಡೆ ಉಕ್ರೇನ್ ಅಧ್ಯಕ್ಷರಾದ ವೊಲಡಿಮರ್ ಝೆಲೆನ್ಸ್ಕಿ ಅವರು ದೇಶ ಬಿಟ್ಟು ಓಡಿ ಹೋಗ್ತಾರೆ ಅನ್ನೋ ಮಾತನ್ನ ಸುಳ್ಳು ಮಾಡಿದ್ದಾರೆ. ಆದ್ರೆ ತಾಲಿಬಾನಿಗಳು ಅಫ್ಗಾನಿಸ್ತಾನವನ್ನ ಕಬ್ಜ ಮಾಡಿಕೊಳ್ಳುವಂತಹ ಸಂದರ್ಭದಲ್ಲಿ ಆ ದೇಶದ ಜನರ ಕೈಬಿಟ್ಟು ಅಲ್ಲಿನ ಅಧ್ಯಕ್ಷರು ಪರಾರಿಯಾಗಿದ್ದರು.. ಅಂತೆಯೇ ಝೆಲೆಂಕ್ಸಿಯವರೂ ಅಂತ ಅಂದಾಜಿಸಲಾಗಿತ್ತು..
ಆದ್ರೆ ಝೆಲೆನ್ಸ್ಕಿ ಖುದ್ದು ತಾವೇ ರಣಾಂಗಣಕ್ಕೆ ಇಳಿದು ಒಬ್ಬ ಮಾದದರಿ ಅಧ್ಯಕ್ಷ ಎನ್ನುವುದನ್ನ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.. ಮತ್ತೊಂದೆಡೆ ಉಕ್ರೇನ್ ತನ್ನ ಕೈಗೊಂಬೆಯಾಗಬೇಕೆಂದು ಪಣ ತೊಟ್ಟ ಪುಟಿನ್ ಇಡೀ ವಿಶ್ವದ ಕೆಂಗಣ್ಣಿಗೆ ಗುರಿಯಾಗಿದ್ದಾರೆ..
ಅಷ್ಟೇ ಅಲ್ಲ ಇಂತಹ ಪರಿಸ್ಥಿತಿಯಲ್ಲಿ ಒಬ್ಬ ಅಧ್ಯಕ್ಷನ ನಿಜವಾದ ಕೆಲಸ ದೇಶದ ಜನರಿಗೆ ಧೈರ್ಯ ತುಂಬುವುದು ಅದನ್ನೇ ಚಾಚೂ ಮಾಡಿರೋ ಝೆಲೆಂಕ್ಸಿ ಕೊನೆ ಉಸಿರು ವರೆಗೂ ದೇಶಕ್ಕಾಗಿ ಹೋರಾಡುತ್ತೇನೆ ಎಂದು ರೋಮಾಂಚನಕಾರಿ ಭಾಷಣ ಮಾಡಿದ್ದರು..
ನಮ್ಮ ಮೇಲೆ ಯುದ್ಧ ಮಾಡಿದ್ರೆ , ನಮ್ಮ ಬೆನ್ನು ನೋಡಲ್ಲ , ಮುಖಗಳನ್ನ ನೋಡುವಿರ ಎಂದಿದ್ದರು…
ಇಂತಹ ಸಂದರ್ಭದಲ್ಲಿ ಉಕ್ರೇನ್ ನಲ್ಲಿ ಹಿರಿಯರು , ಯುವಕರು ದೇಶದ ವಿರುದ್ಧ ಹೋರಾಡಲು ಮುಂದೆ ಬರುತ್ತಿದ್ದಾರೆ..
ಈಗಾಗಲೇ ಒಂದು ಭಾಗದಿಂದ ರಷ್ಯಾ ಉಕ್ರೇನ್ ಮೂಲೆಗಳನ್ನ ವಶಕ್ಕೆ ಪಡೆದು ಮುನ್ನುಗ್ಗುತಿದೆ.. ರಾಜಧಾನಿಗೂ ಎಂಟ್ರಿ ಕೊಟ್ಟಿದೆ…