ಕನ್ನಡ ಸಿನಿಮಾರಂಗದ ನಟ ಉಮೇಶ್ ಹೆಗಡೆ ನಿಧನ
ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ಹಿರಿಯ ನಟರರಾದ ಉಮೇಶ್ ಹೆಗಡೆ ಅವರು ನಿಧನರಾಗಿದ್ದಾರೆ. ನೂರಕ್ಕೂ ಹೆಚ್ಚು ಧಾರವಾಹಿಗಳಲ್ಲಿ , ಕೆಲ ಸಿನಿಮಾಗಳಲ್ಲಿ ನಟಿಸಿರುವ ಇವರು ಮೂಲತಃ ರಂಗಭೂಮಿ ಕಲಾವಿಧರು. ತಮ್ಮ 71 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ನಿನ್ನೆ ಸಿನಿಮಾ ಶೂಟಿಂಗ್ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಸಂಜೆ 7:45ರ ಸುಮಾರಿಗೆ ಅವರಿಗೆ ಹೃದಾಯಾಘಾತವಾಗಿತ್ತು. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾದೇ ಇಂದು ಬೆಳಗ್ಗೆ ನಿಧನರಾಗಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ ಇತ್ತೀಚೆಗಷ್ಟೇ ಸ್ಯಾಂಡಲ್ ವುಡ್ ನಟ ಸತ್ಯಜಿತ್ ಅವರು ಕೂಡ ನಿಧನರಾಗಿದ್ದರು, ಇದರ ಬೆನ್ನಲ್ಲೇ ಮತ್ತೋರ್ವ ನಟನನ್ನ ಸ್ಯಾಂಡಲ್ ವುಡ್ ಕಳೆದುಕೊಂಡಿದ್ದು, ಕಲಾವಿಧನ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.








