ಸತ್ತು ಹೋಗ್ಲಾ ಅಂದ ಸತ್ತು ಹೋಗಪ್ಪಾ ಅಂದೆ : ಉಮೇಶ್ ಸಮರ್ಥನೆ
ಬೆಳಗಾವಿ : “ಸಾಯೋದು ಒಳ್ಳೆಯದು” ಎಂಬ ಹೇಳಿಕೆ ವಿಚಾರವಾಗಿ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯೆ ನೀಡಿದ್ದು, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸುದ್ದಿವಾಹಿನಿಯೊಂದಿಗೆ ಈ ಬಗ್ಗೆ ಮಾತನಾಡಿದ ಉಮೇಶ್ ಕತ್ತಿ, ಈಶ್ವರ ಯಾರು ಅಂಥ ನನಗೆ ಗೊತ್ತಿಲ್ಲ. ಕಾಳಸಂತೆಯಲ್ಲಿ ಅಕ್ಕಿ ದಂಧೆ ಮಾಡ್ತಿದ್ದಾರೆ ಅದನ್ನು ನಾನು ಕೇಳಿದ್ದೆ.
ಅಕ್ಕಿ ಕಡಿತ ಮಾಡಿದ್ದಾರೆ ಸಾಯಬೇಕೋ ಅಂತಾ ಕೇಳಿದ, ಸತ್ತು ಹೋಗಪ್ಪಾ ಅಂದೆ. ಅವನು ಸಾಯ್ತೀನಿ ಅಂದ್ರೆ ನಾನೇನು ಉತ್ತರ ಕೊಡಲಿ ಎಂದು ತಮ್ಮ ಹೇಳಿಕೆ ಬಗ್ಗೆ ವಿವರಣೆ ನೀಡಿದ್ದಾರೆ.
ಇನ್ನು ಏಪ್ರಿಲ್ ತಿಂಗಳಲ್ಲಿ ಬಂದಿದೆ ಮೇ ತಿಂಗಳಲ್ಲಿ ನೋಡೋಣ ಅಂತ ಹೇಳಿದ್ದೇನೆ. ಆರೂವರೆ ಕೋಟಿ ಜನರಿಗೆ ಉತ್ತರ ಕೊಡುತ್ತಾ ಎಲ್ಲಿ ಹೋಗಲಿ ನಾನು..?
ಸತ್ತು ಹೋಗ್ಲಾ ಅಂತ ಕೇಳಿದ್ರೆ ನಾನೇನು ಉತ್ತರಿಸಲಿ ಹೇಳಿ ಎಂದು ಮತ್ತೆ ಉಡಾಫೆ ಹೇಳಿಕೆಯನ್ನ ನೀಡಿದ್ದಾರೆ.
ಅಕ್ಕಿ ಕಡಿತ ವಿಚಾರವಾಗಿ ರೈತರೊಬ್ಬರು ಕತ್ತಿ ಅವರಿಗೆ ಕರೆ ಮಾಡಿದ್ದರು. ಈ ವೇಳೆ “ಲಾಕ್ ಡೌನ್ ಇದೆ ಅಲ್ಲಿಯವರೆಗೆ ಉಪವಾಸ ಸಾಯೋದಾ ಎಂದು ರೈತ ಪ್ರಶ್ನಿಸಿದ್ದರು. ಇದಕ್ಕೆ ಸಚಿವರು, ಸಾಯೋದು ಒಳ್ಳೆಯದು ಎಂದಿದ್ದರು.