ರಾಹುಲ್ ಗೆ ವಾರ್ನಿಂಗ್ ಕೊಟ್ಟ ಅಂಪೈರ್.. ಯಾಕೆ ಗೊತ್ತಾ..?
1 min read
ರಾಹುಲ್ ಗೆ ವಾರ್ನಿಂಗ್ ಕೊಟ್ಟ ಅಂಪೈರ್.. ಯಾಕೆ ಗೊತ್ತಾ..? Rahul saaksha tv
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕೆಎಲ್ ರಾಹುಲ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ.
ಮೊದಲ ಟೆಸ್ಟ್ ನಲ್ಲಿ ಶತಕ ಸಿಡಿಸಿದ್ದ ರಾಹುಲ್ ಎರಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿದ್ದಾರೆ. ವಿರಾಟ್ ಬದಲಿಗೆ ಟೀಂ ಇಂಡಿಯಾದ ಸಾರಥ್ಯ ವಹಿಸಿಕೊಂಡಿರುವ ರಾಹುಲ್, ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದರು.
ಆದ್ರೆ ಮೊದಲ ಸೆಷನ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರಾಹುಲ್ ಗೆ ಫೀಲ್ಡ್ ಅಂಪೈರ್ ಎರಾಸ್ಮಸ್ ಎಚ್ಚರಿಕೆ ನೀಡಿದ್ದಾರೆ.
ಮೊದಲ ಇನಿಂಗ್ಸ್ ನ ಐದನೇ ಓವರ್‌ನಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಮೂರನೇ ಎಸೆತವನ್ನು ಬೌಲ್ ಮಾಡಲು ಬಂದಿದರು. ಆದ್ರೆ ರಾಹುಲ್ ಕೊನೆಯ ಕ್ಷಣದಲ್ಲಿ ವಿಕೆಟ್ ಯಿಂದ ದೂರ ಸರಿದರು.
ಚೆಂಡನ್ನು ಎದುರಿಸಲು ಸಿದ್ಧವಿಲ್ಲದ ಕಾರಣ ರಾಹುಲ್ ಕೊನೆಯ ಕ್ಷಣದಲ್ಲಿ ಬೌಲರ್ ನನ್ನು ತಡೆದರು.
ತಕ್ಷಣ ರಾಹುಲ್ ಕ್ಷಮೆ ಯಾಚಿಸಿದರೂ ಅಂಪೈರ್ ಸ್ವಲ್ಪ ಬೇಗ ಆಡುವಂತೆ ತಾಕೀತು ಮಾಡಿದರು. ಈ ಸಂಪೂರ್ಣ ಸಂಭಾಷಣೆಯನ್ನು ಸ್ಟಂಪ್ ಮೈಕ್‌ನಲ್ಲಿ ರೆಕಾರ್ಡ್ ಮಾಡಲಾಗಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೇ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ.
ಮಯಾಂಕ್ ಮತ್ತು ರಾಹುಲ್ ಜೋಡಿ ಮೊದಲ ವಿಕೆಟ್ಗೆ 36 ರನ್ ಸೇರಿಸಿತು. ಈ ವೇಳೆ ದಾಳಿಗಿಳಿದ ಜನ್ಸೆನ್, 26 ರನ್ಗಳಿಸಿದ ಅಗರ್ವಾಲ್ ವಿಕೆಟ್ ಪಡೆದರು.
Marais is a sweet guy #INDvSA. As is the stand-in captain pic.twitter.com/KVQNqUPt06
— Benaam Baadshah (@BenaamBaadshah4) January 3, 2022
ಒಲಿವಿಯರ್ ಪೂಜಾರಾ (3), ಅಜಿಂಕ್ಯಾ ರಹಾನೆ (0) ವಿಕೆಟ್ ಅನ್ನು ಬೆನ್ನು ಬೆನ್ನಿಗೆ ಪಡೆದರು. ಹನುಮ ವಿಹಾರಿ ಆಟವೂ 20 ರನ್ಗೆ ಅಂತ್ಯ ಕಂಡಿತ್ತು.
ಈ ನಡುವೆ ನಾಯಕ ರಾಹುಲ್ ಅರ್ಧಶತಕದ ಗಡಿ ದಾಟಿದ್ದರು. ಆದರೆ ಜನ್ಸೆನ್ 50 ರನ್ಗಳಿಸಿದ್ದ ರಾಹುಲ್ ವಿಕೆಟ್ ಪಡೆದರು.
ರಿಷಬ್ ಪಂತ್ (17), ಶಾರ್ದೂಲ್ ಥಾಕೂರ್ (0) ಮತ್ತು ಮೊಹಮ್ಮದ್ ಶಮಿ (9) ರನ್ಗಳಿಸಿ ಔಟಾದರು. ಇದೆಲ್ಲದರ ಮಧ್ಯೆ ಅಶ್ವಿನ್ 50 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 46 ರನ್ಗಳಿಸಿ ಮಿಂಚಿದರು.
ಟೀಮ್ ಇಂಡಿಯಾ 202 ರನ್ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಜನ್ಸೆನ್ 4 ವಿಕೆಟ್ ಪಡೆದರೆ, ರಬಾಡಾ ಮತ್ತು ಒಲಿವಿಯರ್ ತಲಾ 3 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಮಾರ್ಕ್ ರಾಂ ವಿಕೆಟ್ ಕಳೆದುಕೊಂಡು 35 ರನ್ಗಳಿಸಿದೆ. 11 ರನ್ಗಳಿಸಿದ ಡೀನ್ ಎಲ್ಗರ್ ಮತ್ತು 14 ರನ್ಗಳಿಸಿರು ಕಿಗಾನ್ ಪೀಟರ್ಸನ್ 2ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.