ಚಿಕ್ಕಬಳ್ಳಾಪುರ: ಅಮ್ಮನ ಸಾವಿನ ನೋವು ತಾಳಲಾರದೆ ಅಣ್ಣ (Brother) ಹಾಗೂ ತಂಗಿ (Sister) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಭಯಾನಕ ಘಟನೆಯೊಂದು ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ನಡೆದಿದೆ.
ಶಿಡ್ಲಘಟ್ಟ ನಗರದ ಶೆಟ್ಟಪ್ಪನ ತೋಪಿನ ಹತ್ತಿರ ರೈಲ್ವೇ ಹಳಿಗಳ ಬಳಿ ಈ ಘಟನೆ ನಡೆದಿದೆ. ಅಣ್ಣ ಪ್ರಭು ಮತ್ತು ತಂಗಿ ನವ್ಯ ಸಾವನ್ನಪ್ಪಿದ ದುರ್ದೈವಗಳು ಎಂದು ಗುರುತಿಸಲಾಗಿದೆ.
ಶಿಡ್ಲಘಟ್ಟದ ಪ್ರೇಮ ನಗರದ ನಿವಾಸಿಗಳಾಗಿರುವ ಪ್ರಭು ಮತ್ತು ನವ್ಯ ಆತ್ಮಹತ್ಯೆ ಶರಣಾಗುವ ಮುನ್ನ ಒಬ್ಬರ ಕೈಯನ್ನು ಒಬ್ಬರು ದಾರದಿಂದ ಕಟ್ಟಿಕೊಂಡು ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡವರ ತಾಯಿ ಇತ್ತೀಚೆಗೆ ಸಾವನ್ನಪ್ಪಿದ್ದರು. ಆದರೆ, ತಾಯಿಯ ಮರಣಿದಿಂದ ಇಬ್ಬರೂ ಮಾನಸಿಕ ಖಿನ್ನತೆಗೆ ಜಾರಿದ್ದರು. ನೋವು ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳೀಯ ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








