ADVERTISEMENT
Wednesday, November 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಪ್ರಧಾನಿಯೊಬ್ಬರಿಂದ ನಿಭಾಯಿಸಲು ಸಾಧ್ಯವಿಲ್ಲ – ರಾಜನ್…

admin by admin
May 22, 2020
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಹೊಸ ದಿಲ್ಲಿ, ಮೇ 22 : ಭಾರತೀಯ ರಿಸರ್ವ್​ ಬ್ಯಾಂಕ್​ನ ಮಾಜಿ ಗವರ್ನರ್ ರಘುರಾಮ್ ರಾಜನ್ ಕೊರೊನಾದಿಂದ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ಪ್ರಧಾನಿಯೊಬ್ಬರಿಂದಲೇ ನಿಭಾಯಿಸಲು ಸಾಧ್ಯವಿಲ್ಲ. ಇದರಿಂದ ದೇಶದ ಅರ್ಥಿಕತೆ ಮತ್ತಷ್ಟು ಬಿಗಡಾಯಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ರಘುರಾಮ್ ರಾಜನ್, ಅವರು ನಾವು ಎದುರಿಸುತ್ತಿರುವ ದೊಡ್ಡ ಆರ್ಥಿಕ ಹೊಡೆತ ಬಗ್ಗೆ ನನಗೆ ಬೇಸರವಿದೆ. ಇದು ಕೇವಲ ಪ್ರಧಾನಿ ಕಾರ್ಯಲಯದಿಂದ ಮಾತ್ರ ನಿಭಾಯಿಸಲು ಸಾಧ್ಯವಿಲ್ಲ. ವಿರೋಧ ಪಕ್ಷಗಳ ಅಭಿಪ್ರಾಯಗಳನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕು. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ, ದೇಶದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಕುಸಿಯುವುದು ಖಂಡಿತ ಎಂದು ಅಭಿಪ್ರಾಯ ‌ಪಟ್ಟಿದ್ದಾರೆ.

Related posts

UGC NET: ಪರೀಕ್ಷಾ ನಗರ ಮಾಹಿತಿ ಸ್ಲಿಪ್ ಬಿಡುಗಡೆ ದಿನಾಂಕ ಪರಿಷ್ಕರಣೆ; ನ.25ರೊಳಗೆ ಲಭ್ಯ

UGC NET: ಪರೀಕ್ಷಾ ನಗರ ಮಾಹಿತಿ ಸ್ಲಿಪ್ ಬಿಡುಗಡೆ ದಿನಾಂಕ ಪರಿಷ್ಕರಣೆ; ನ.25ರೊಳಗೆ ಲಭ್ಯ

November 25, 2026
ಮೂರೂವರೆ ವರ್ಷಗಳ ಬಳಿಕ ಶಕ್ತಿ ಯೋಜನೆ ನೂಕುನುಗ್ಗಲಿಗೆ ಬ್ರೇಕ್ ಹಾಕಿದ ಸಾರಿಗೆ ಇಲಾಖೆ: ಇನ್ಮುಂದೆ ಬಸ್‌ಗಳಲ್ಲಿ ಸೀಟು ಇದ್ದಷ್ಟೇ ಪ್ರಯಾಣಿಕರಿಗೆ ಅವಕಾಶ!

ಮೂರೂವರೆ ವರ್ಷಗಳ ಬಳಿಕ ಶಕ್ತಿ ಯೋಜನೆ ನೂಕುನುಗ್ಗಲಿಗೆ ಬ್ರೇಕ್ ಹಾಕಿದ ಸಾರಿಗೆ ಇಲಾಖೆ: ಇನ್ಮುಂದೆ ಬಸ್‌ಗಳಲ್ಲಿ ಸೀಟು ಇದ್ದಷ್ಟೇ ಪ್ರಯಾಣಿಕರಿಗೆ ಅವಕಾಶ!

November 25, 2026

ಈ ಮೊದಲು ಭಾರತ ಸರ್ಕಾರದ ಆರ್ಥಿಕ ಸಲಹೆಗಾರರು ಮತ್ತು ಐಎಮ್​ಎಫ್ ​ನ ಮುಖ್ಯಸ್ಥರು ಆಗಿ ಕಾರ್ಯ ನಿರ್ವಹಿಸಿದ್ದ ರಘುರಾಮ್ ರಾಜನ್‌ ಕೊರೊನಾ ಸೋಂಕಿನಿಂದ ಉಂಟಾಗಿರುವ ‌ಆರ್ಥಿಕ ಪರಿಸ್ಥಿತಿಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಸರ್ಕಾರ ಕೂಡಲೇ ದೇಶದ ವಿವಿಧ ಆರ್ಥಿಕ ತಜ್ಞರನ್ನು ಸಂಪರ್ಕಿಸಿ ಅವರ ಸಲಹೆ ಸೂಚನೆಗಳನ್ನು ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ. ದೇಶದ ಅರ್ಥಿಕ ವಿಚಾರದಲ್ಲಿ ರಾಜಕೀಯದ ಆಚೆ ನಿಂತು ಚಿಂತಿಸದಿದ್ದರೆ ಮುಂದೆ ಪರಿಸ್ಥಿತಿ ತುಂಬಾ ಹದಗೆಡಲಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಸನ್ನಿವೇಶದಲ್ಲಿ ಲಾಕ್ ಡೌನ್ ಮತ್ತು ಕೊರೊನಾದಿಂದ ಉಂಟಾಗಿರುವ ನಷ್ಟವನ್ನು ಭರಿಸುವುದಷ್ಟೇ ಮುಖ್ಯವಲ್ಲ ಜೊತೆಗೆ ಹಳಿ ತಪ್ಪಿರುವ ಆರ್ಥಿಕತೆಯನ್ನು ಮುಂದಿನ ಮೂರು – ನಾಲ್ಕು ವರ್ಷಗಳ ಕಾಲ ನಿಭಾಯಿಸುವ ಸವಾಲು ನಮ್ಮ ಮುಂದಿದೆ. ಆದರೆ ಸರ್ಕಾರ ದಾರಿ ತಪ್ಪಿರುವ ಅರ್ಥಿಕತೆಯ ಜವಾಬ್ದಾರಿ ಹೊರಲು ತಯಾರಿಲ್ಲ‌ ಮತ್ತು ಒಪ್ಪಿಕೊಳ್ಳಲು ತಯಾರಿಲ್ಲ‌ ಎಂದು ರಘುರಾಮ್ ರಾಜನ್ ಬೇಸರ ವ್ಯಕ್ತಪಡಿಸಿದ್ದಾರೆ.‌ ಭಾರತದಲ್ಲಿ ಬಿಜೆಪಿಯ ಕೇಂದ್ರ ಮಾಜಿ ಹಣಕಾಸು ಸಚಿವ ಯಶ್ವಂತ್ ಸಿನ್ಹಾ, ಕಾಂಗ್ರೆಸ್ ನ ಪಿ ಚಿದಂಬರಂ ಸೇರಿ ಅನೇಕ ಘಟಾನುಘಟಿ ಆರ್ಥಿಕ ತಜ್ಞರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಬಿಟ್ಟು ಅವರೊಂದಿಗೆ ಚರ್ಚೆ ನಡೆಸಬೇಕಿದೆ ಎಂದು ರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ಘೋಷಿಸಿರುವ 20.9 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಬಗ್ಗೆ ಮಾತನಾಡಿರುವ ರಘುರಾಮ್ ರಾಜನ್ ಈ ಪ್ಯಾಕೇಜ್ ಅಸಮರ್ಪಕ ಎಂದು ಹೇಳಿದ್ದು, ಸರ್ಕಾರ ಮೊದಲು ಮುಂದಿರುವ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ವಲಸೆ ಕಾರ್ಮಿಕರಿಗೆ ಮತ್ತು ಬಡ ಜನರಿಗೆ ಕೇವಲ ಧವಸ ಧಾನ್ಯ ನೀಡಿದರೆ ಸಾಕಾಗುವುದಿಲ್ಲ ಜೊತೆಗೆ ಅಡುಗೆ ಎಣ್ಣೆ, ತರಕಾರಿಗಳ ಅವಶ್ಯಕತೆಯೂ ಇರುತ್ತದೆ. ಅದಕ್ಕಿಂತ ಹೆಚ್ಚಾಗಿ ಬದುಕು ಸಾಗಿಸಲು ಹಣ, ತಲೆಯ ಮೇಲೆ ಸೂರಿನ ಅವಶ್ಯಕತೆ ಇದೆ ಎಂದ ರಘುರಾಮ್ ರಾಜನ್ ನಗರ ತೊರೆದು ಊರು ಸೇರಿರುವ ಯುವಕರನ್ನು ಪುನಃ ನಗರದತ್ತ ಸೆಳೆಯುವಲ್ಲಿ ಸರ್ಕಾರದ ಜವಾಬ್ದಾರಿ ಬಹಳವಿದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಅಮೆರಿಕ‌ದ ಮಾದರಿಯಲ್ಲಿ ‌ಉದ್ಯಮಗಳಿಗೆ ಹಣಕಾಸು ಸಹಾಯ ನೀಡಲು ಅಸಾಧ್ಯ. ‌ಆದರೆ ಪ್ರಮುಖ ಉದ್ಯಮಗಳಿಗೆ ಸಾಲಮನ್ನಾದಂತಹ ಸೌಲಭ್ಯ ನೀಡಬಹುದು. ಹಣಕಾಸು ‌ವಲಯಕ್ಕೆ ಈಗಾಗಲೇ ತೀವ್ರ ಹೊಡೆತ ಬಿದ್ದಿದ್ದು, ಅದರ ಪುನರ್‌ ಚೇತನಕ್ಕೆ ‌ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಾಗಿದೆ ಎಂದು ರಾಜನ್ ಸಲಹೆ ನೀಡಿದರು.

ಸೋರಿಕೆಯನ್ನು ತಡೆಗಟ್ಟಿ ಅತ್ಯುತ್ತಮ ನಿರ್ವಹಣೆಯ ಮೂಲಕ ಸಾರ್ವಜನಿಕ ಬ್ಯಾಂಕ್​ಗಳನ್ನು ಉಳಿಸುವ‌ ಅಗತ್ಯವಿದೆ ‌ಎಂದ ರಘುರಾಮ್ ರಾಜನ್ ಕೃಷಿ ಕ್ಷೇತ್ರ ಬದಲಾವಣೆಗೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಗೇಮ್ ಚೇಂಜರ್ ಆಗುವ ಸಾಧ್ಯತೆ ಇದ್ದು, ನೀಡಿರುವ ಸೌಲಭ್ಯಗಳನ್ನು ಸಂಪೂರ್ಣವಾಗಿ ಮತ್ತು ಪ್ರಾಮಾಣಿಕವಾಗಿ ಜಾರಿಗೆ ತರುವುದು ಬಹಳ ಮುಖ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Tags: Narendra modiRaghuram RajanReserve Bank of India
ShareTweetSendShare
Join us on:

Related Posts

UGC NET: ಪರೀಕ್ಷಾ ನಗರ ಮಾಹಿತಿ ಸ್ಲಿಪ್ ಬಿಡುಗಡೆ ದಿನಾಂಕ ಪರಿಷ್ಕರಣೆ; ನ.25ರೊಳಗೆ ಲಭ್ಯ

UGC NET: ಪರೀಕ್ಷಾ ನಗರ ಮಾಹಿತಿ ಸ್ಲಿಪ್ ಬಿಡುಗಡೆ ದಿನಾಂಕ ಪರಿಷ್ಕರಣೆ; ನ.25ರೊಳಗೆ ಲಭ್ಯ

by Shwetha
November 25, 2026
0

UGC NET ಡಿಸೆಂಬರ್ 2026 ಪರೀಕ್ಷೆಗೆ ಸಿದ್ಧವಾಗುತ್ತಿರುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ಅಪ್‌ಡೇಟ್ ನೀಡಿದೆ. ಪರೀಕ್ಷಾ ಕೇಂದ್ರದ ನಗರ ಮಾಹಿತಿ ನೀಡುವ Exam...

ಮೂರೂವರೆ ವರ್ಷಗಳ ಬಳಿಕ ಶಕ್ತಿ ಯೋಜನೆ ನೂಕುನುಗ್ಗಲಿಗೆ ಬ್ರೇಕ್ ಹಾಕಿದ ಸಾರಿಗೆ ಇಲಾಖೆ: ಇನ್ಮುಂದೆ ಬಸ್‌ಗಳಲ್ಲಿ ಸೀಟು ಇದ್ದಷ್ಟೇ ಪ್ರಯಾಣಿಕರಿಗೆ ಅವಕಾಶ!

ಮೂರೂವರೆ ವರ್ಷಗಳ ಬಳಿಕ ಶಕ್ತಿ ಯೋಜನೆ ನೂಕುನುಗ್ಗಲಿಗೆ ಬ್ರೇಕ್ ಹಾಕಿದ ಸಾರಿಗೆ ಇಲಾಖೆ: ಇನ್ಮುಂದೆ ಬಸ್‌ಗಳಲ್ಲಿ ಸೀಟು ಇದ್ದಷ್ಟೇ ಪ್ರಯಾಣಿಕರಿಗೆ ಅವಕಾಶ!

by Shwetha
November 25, 2026
0

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬೆನ್ನಲ್ಲೇ, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರವು ತಾನು...

ಬಾಂಗ್ಲಾದೇಶಕ್ಕೆ ಮರಳಲು ಡಿ.16 ದಿನಾಂಕ ಘೋಷಿಸಿದ ಶೇಖ್ ಹಸೀನಾ; ವಿಮಾನ ವ್ಯವಸ್ಥೆಗೆ ಮನವಿ

ಬಾಂಗ್ಲಾದೇಶಕ್ಕೆ ಮರಳಲು ಡಿ.16 ದಿನಾಂಕ ಘೋಷಿಸಿದ ಶೇಖ್ ಹಸೀನಾ; ವಿಮಾನ ವ್ಯವಸ್ಥೆಗೆ ಮನವಿ

by Shwetha
November 25, 2026
0

ಭಾರತದಲ್ಲಿ ಗಡಿಪಾರು ಜೀವನ ನಡೆಸುತ್ತಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ತಮ್ಮ ತಾಯ್ನಾಡಿಗೆ ಮರಳಲು ಡಿಸೆಂಬರ್ 16ರ ದಿನಾಂಕವನ್ನು ಘೋಷಿಸಿದ್ದಾರೆ. ಬಾಂಗ್ಲಾದೇಶದ ವಿಜಯ ದಿನದಂದು ಢಾಕಾಗೆ...

ಆರ್‌ಎಸ್‌ಎಸ್ ಕಾರ್ಯ ವೈಖರಿ ಕೊಂಡಾಡಿದ ಮೋಹನ್ ಲಾಲ್: ಜಾರ್ಜ್ ಕುಟ್ಟಿಗೆ ಶಿಕ್ಷೆಯಿಂದ ಪಾರಾಗಲು ಕೊನೆಗೂ ದಾರಿ ಸಿಕ್ಕಿತು ಎಂದು ಕಾಲೆಳೆದ ನೆಟ್ಟಿಗರು!

ಆರ್‌ಎಸ್‌ಎಸ್ ಕಾರ್ಯ ವೈಖರಿ ಕೊಂಡಾಡಿದ ಮೋಹನ್ ಲಾಲ್: ಜಾರ್ಜ್ ಕುಟ್ಟಿಗೆ ಶಿಕ್ಷೆಯಿಂದ ಪಾರಾಗಲು ಕೊನೆಗೂ ದಾರಿ ಸಿಕ್ಕಿತು ಎಂದು ಕಾಲೆಳೆದ ನೆಟ್ಟಿಗರು!

by Shwetha
November 25, 2026
0

ಕೋಝಿಕ್ಕೋಡ್: ಮಲಯಾಳಂ ಚಿತ್ರರಂಗದ ಮೇರು ನಟ ಮೋಹನ್ ಲಾಲ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನಂಟು ಹೊಂದಿರುವ ಮಲಯಾಳಂ ವಾರಪತ್ರಿಕೆ ಕೇಸರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು,...

ಅಕ್ಷರ ದಾಸೋಹದವರು 4 ಸಾವಿರಕ್ಕೆ, ಶಿಕ್ಷಕರು 12 ಸಾವಿರಕ್ಕೆ ದುಡಿಯುತ್ತಿಲ್ಲವೇ?: ಆಶಾ ಕಾರ್ಯಕರ್ತೆಯರ ಮುಷ್ಕರಕ್ಕೆ ಸಚಿವ ಯು.ಟಿ. ಖಾದರ್ ಖಾರದ ಪ್ರಶ್ನೆ, ಕೇಂದ್ರದತ್ತ ಬೊಟ್ಟು!

ಅಕ್ಷರ ದಾಸೋಹದವರು 4 ಸಾವಿರಕ್ಕೆ, ಶಿಕ್ಷಕರು 12 ಸಾವಿರಕ್ಕೆ ದುಡಿಯುತ್ತಿಲ್ಲವೇ?: ಆಶಾ ಕಾರ್ಯಕರ್ತೆಯರ ಮುಷ್ಕರಕ್ಕೆ ಸಚಿವ ಯು.ಟಿ. ಖಾದರ್ ಖಾರದ ಪ್ರಶ್ನೆ, ಕೇಂದ್ರದತ್ತ ಬೊಟ್ಟು!

by Shwetha
November 25, 2026
0

ಮಂಗಳೂರು: ಗೌರವಧನ ಹೆಚ್ಚಳಕ್ಕಾಗಿ ಪಟ್ಟು ಹಿಡಿದು ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟದ ವಿರುದ್ಧ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವ ಯು.ಟಿ. ಖಾದರ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram