Under-19 World Cup : ಆಗ ಹುಡುಗರು.. ಈಗ ಸೂಪರ್ ಸ್ಟಾರ್ಸ್
ಅಂಡರ್-19 ವಿಶ್ವಕಪ್ ಸಂಭ್ರಮ ಶನಿವಾರ ಕೊನೆಗೊಳ್ಳಲಿದೆ. ಟೀಂ ಇಂಡಿಯಾ, ಇಂಗ್ಲೆಂಡ್ ಫೈನಲ್ ನಲ್ಲಿ ಮುಖಾಮುಖಿಯಾಗಿವೆ.
ಟೀಂ ಇಂಡಿಯಾದ ಯುವ ತಂಡ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಬಲಿಷ್ಠವಾಗಿ ಕಾಣುತ್ತಿದೆ, ಆದರೆ ಎದುರಾಳಿ ಇಂಗ್ಲೆಂಡ್ ತಂಡವನ್ನು ಕಡೆಗಣಿಸುವಂತೆ ಇಲ್ಲ.
ಸ್ವಲ್ಪ ಯಾಮಾರಿದ್ರೂ ಮೊದಲಿಗೆ ಮೋಸ ಆಗುತ್ತದೆ. ಈಗಾಗಲೇ ನಾಲ್ಕು ಬಾರಿ ಅಂಡರ್-19 ವಿಶ್ವಕಪ್ ಗೆದ್ದಿರುವ ಟೀಂ ಇಂಡಿಯಾ ಐದನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.
ಹೀಗಾಗಿ ಯಶ್ ಧುಲ್ ನೇತೃತ್ವದ ಯುವ ತಂಡ ಏನು ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕು. ಐಸಿಸಿಯು ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ತನ್ನದೇ ಆದ ಶೈಲಿಯಲ್ಲಿ ಪ್ರಮೋಷನ್ ಮಾಡುತ್ತಿದೆ.
ಕಿಂಗ್ ವಿರಾಟ್ ಕೊಹ್ಲಿ, ಜೋ ರೂಟ್, ಬಾಬರ್ ಅಜಮ್, ಸ್ಟೀವ್ ಸ್ಮಿತ್ ,ಬೆನ್ ಸ್ಟೋಕ್ಸ್ ಮತ್ತು ಕೆ.ಎಲ್.ರಾಹುಲ್ ಅವರಂತಹ ಸ್ಟಾರ್ ಕ್ರಿಕೆಟಿಗರು ಒಮ್ಮೆ ಅಂಡರ್-19 ಗಾಗಿ ಆಡಿದ್ದರು.
ಅವರು ಅಂಡರ್-19 ವಿಶ್ವಕಪ್‌ನಲ್ಲಿ ತಮ್ಮ ದೇಶಕ್ಕಾಗಿ ಆಡಿದ್ದರು ಮತ್ತು ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಲ್ಲಿಯವರೆಗೂ ಇವರ ಆಟವನ್ನ ನೋಡಿ ನಾವು ಎಂಜಾಯ್ ಮಾಡಿದ್ದೇವೆ.
ಅಂತರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿಕೊಡುವ ಮೊದಲು ಈ ಕ್ರಿಕೆಟಿಗರ ಆಟ ಹೇಗಿತ್ತೋ ನೋಡಿ ಎಂದು ಐಸಿಸಿ ವಿಡಿಯೋ ಬಿಡುಗಡೆ ಮಾಡಿದೆ.
“ವರ್ಷಗಳು ಕಳೆದಿವೆ.. ಟೆಕ್ನಿಕ್ ಬದಲಾಗಿರಬಹುದು.. ಆದರೆ ಕ್ಲಾಸ್ ಹಾಗೆಯೇ ಉಳಿದಿದೆ. ಈಗ ಅವರೆಲ್ಲ ದೊಡ್ಡ ಸೂಪರ್‌ಸ್ಟಾರ್‌ಗಳು.. ಇದರಲ್ಲಿ ಯಾವ ಆಟಗಾರ ಬದಲಾಗಿದ್ದಾರೆ ಎಂದು ಸ್ವಲ್ಪ ಹೇಳಿ” ಎಂದು ಐಸಿಸಿ ಬರೆದುಕೊಂಡಿದೆ.