Under 19 World Cup: ನಾವೇ ಚಾಂಪಿಯನ್ಸ್..!!! under-19-world-cup-india-beats-england saaksha tv
Under 19 World Cup ಫೈನಲ್ ಪಂದ್ಯದ ಭಾರತದ ಇನ್ನಿಂಗ್ಸ್ ನ 47.4 ನೇ ಓವರ್ ನಲ್ಲಿ ಭಾರತದ ದಿನೇಶ್ ಬಾನಾ ಸಿಕ್ಸ್ ಸಿಡಿಸುತ್ತಿದ್ದಂತೆ ಆಂಟಿಗ್ವಾ ಅಂಗಳದಲ್ಲಿ ಭಾರತೀಯರ ಸಂಭ್ರಮ ಮುಗಿಲು ಮುಟ್ಟಿತ್ತು. ಭಾರತದ ಕಿರಿಯ ತಂಡದ ಆಟಗಾರರು ವೆಸ್ಟ್ ಇಂಡೀಸ್ ನೆಲದಲ್ಲಿ ಇತಿಹಾಸ ಸೃಷ್ಠಿಸಿದ್ದರು. ಕಾಮೆಂಟೇರ್ ಗಳನ್ನು India are World Champions again ಎಂದು ಜೋರಾಗಿ ಹರ್ಷೋದ್ಘಾರ ಮಾಡಿದರು.
ಹೌದು..! ವೆಸ್ಟ್ ಇಂಡೀಸ್ ನ ಆಂಟಿಗ್ವಾ ನೆಲದಲ್ಲಿ ನಡೆದಿ ಅಂಡರ್ 19 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಜ್ಯೂನಿಯರ್ ಟೀಂ ಇಂಡಿಯಾ ನಾಲ್ಕು ವಿಕೆಟ್ ಗಳ ಜಯ ಸಾಧಿಸಿದೆ. ಆ ಮೂಲಕ ಐದನೇ ಬಾರಿಗೆ ಅಂಡರ್ 19 ವಿಶ್ವಕಪ್ ಗೆದ್ದು ಬೀಗಿದೆ. ಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್ ತಂಡವನ್ನು 4 ವಿಕೆಟ್ಗಳಿಂದ ಸೋಲಿಸಿದ ಭಾರತ ವೆಸ್ಟ್ಇಂಡೀಸ್ನಲ್ಲಿ ಅಜೇಯ ತಂಡವಾಗಿ ವಿಶ್ವಕಪ್ ಗೆ ಮುತ್ತಿಟ್ಟಿದೆ.
ಅಂದಹಾಗೆ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಿಂದಲೂ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಾ ಸಾಗಿದ ಇಂಗ್ಲೆಂಡ್ 91 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಇಂಗ್ಲೆಂಡ್ ಗೆ ರೀವ್ ಮತ್ತು ಸೇಲ್ಸ್ ಆಸರೆಯಾದರು. ರೀವ್ ವೇಗದ ಆಟ ಆಡಿದರು. ಈ ಜೋಡಿ 8ನೇ ವಿಕೆಟ್ಗೆ 93 ರನ್ಗಳ ಜೊತೆಯಾಟ ಆಡಿತು. ಈ ಹಂತದಲ್ಲಿ ದಾಳಿಗಿಳಿದ ರವಿಕುಮಾರ್ 95 ರನ್ಗಳಿಸಿದ್ದ ರೀವ್ ವಿಕೆಟ್ ಹಾರಿಸಿದರು. ಇದರ ಬೆನ್ನಲ್ಲೇ ಥಾಮಸ್ ಆಸ್ಪಿನ್ ವಾಲ್ ಕೂಡ ಔಟಾದರು. ಇಂಗ್ಲೆಂಡ್ ತಂಡವನ್ನು ಭಾರತೀಯ ಬೌಲರ್ ಗಳು 44.5 ಓವರುಗಳಲ್ಲೇ ಆಲೌಟ್ ಮಾಡಿದರು. ಕೇವಲ 189 ರನ್ಗಳಿಗೆ ಇಂಗ್ಲೆಂಡ್ ಆಲೌಟ್ ಆಗಿತ್ತು. ರಾಜ್ ಭಾವಾ 5, ರವಿಕುಮಾರ್ 4 ವಿಕೆಟ್ ಪಡೆದು ಮಿಂಚಿದರು.
ಈ ಗುರಿಯನ್ನು ಬೆಟ್ಟಿದ ಟೀಂ ಇಂಡಿಯಾ, ಮೊದಲ ಓವರ್ ನಲ್ಲಿಯೇ ಶಾಕ್ ಕಂಡಿತು. ರಘುವಂಶಿ ಜೊಶುವಾಗೆ ವಿಕೆಟ್ ಒಪ್ಪಿಸಿದರು. ಬಳಿಕ ಹರ್ನೂರ್ ಸಿಂಗ್ ಮತ್ತು ಶೇಕ್ ರಶೀದ್ ತಾಳ್ಮೆಯ ಆಟ ಆಡಿದರು. 2ನೇ ವಿಕೆಟ್ಗೆ ಈ ಜೋಡಿ 49 ರನ್ಗಳ ಜೊತೆಯಾಟ ಆಡಿತು. ಈ ಹಂತದಲ್ಲಿ ಅಸ್ಪಿನ್ ವಾಲ್ 21 ರನ್ಗಳಿಸಿದ್ದ ಹರ್ನೂರ್ ವಿಕೆಟ್ ಪಡೆದರು.
ಯಶ್ ಧುಲ್ ಮತ್ತು ಶೇಕ್ ರಶೀದ್ ಉತ್ತಮ ಜೊತೆಯಾಟ ಆಡಿದರು. ರಶೀದ್ 50 ರನ್ಗಳಿಸಿ ಔಟಾದರು. ಇದರ ಬೆನ್ನಲ್ಲೇ ಯಶ್ ಧುಲ್ ಕೂಡ 17 ರನ್ಗಳಿಸಿ ಸೇಲ್ಸ್ ಗೆ ವಿಕೆಟ್ ಒಪ್ಪಿಸಿದರು. ನಿಶಾಂತ್ ಸಿಂಧು ಮತ್ತು ರಾಜ್ ಭಾವಾ ಕೌಂಟರ್ ಅಟ್ಯಾಕ್ ಮಾಡಿದರು.ಈ ಜೋಡಿ 73 ರನ್ಗಳ ಜೊತೆಯಾಟ ಆಡಿತು. ಈ ಹಂತದಲ್ಲಿ ಭಾವಾ 35 ರನ್ಗಳಿಸಿ ಔಟಾದರು. ಕೌಶಲ್ ಥಾಂಬೆ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಈ ಮಧ್ಯೆ ನಿಶಾಂತ್ ಸಿಂಧು ಅಜೇಯ ಅರ್ಧಶತಕ ಬಾರಿಸಿದರು. ಕ್ರೀಸ್ಗಿಳಿದ ದಿನೇಶ್ ಬಾನಾ ಸತತ 2 ಎಸೆತಗಳಲ್ಲಿ 2 ಸಿಕ್ಸರ್ ಬಾರಿಸುತ್ತಿದ್ದಂತೆ ಟೀಮ್ ಇಂಡಿಯಾ ಚಾಂಪಿಯನ್ ತಂಡವಾಗಿ ಸಂಭ್ರಮಿಸಿತು.
ಬ್ಯಾಟಿಂಗ್ ಬೌಲಿಂಗ್ ನಲ್ಲಿ ಮಿಂಚಿದ ರಾಜ್ ಬಾವಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದರು.









