ADVERTISEMENT
Wednesday, June 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Under 19 World Cup: ನಾವೇ ಚಾಂಪಿಯನ್ಸ್..!!!

Mahesh M Dhandu by Mahesh M Dhandu
February 6, 2022
in Newsbeat, Sports, ಕ್ರೀಡೆ
under-19-world-cup-india-beats-england saaksha tv
Share on FacebookShare on TwitterShare on WhatsappShare on Telegram

Under 19 World Cup: ನಾವೇ ಚಾಂಪಿಯನ್ಸ್..!!! under-19-world-cup-india-beats-england saaksha tv

Under 19 World Cup ಫೈನಲ್ ಪಂದ್ಯದ ಭಾರತದ ಇನ್ನಿಂಗ್ಸ್ ನ 47.4 ನೇ ಓವರ್ ನಲ್ಲಿ ಭಾರತದ ದಿನೇಶ್ ಬಾನಾ ಸಿಕ್ಸ್ ಸಿಡಿಸುತ್ತಿದ್ದಂತೆ ಆಂಟಿಗ್ವಾ ಅಂಗಳದಲ್ಲಿ ಭಾರತೀಯರ ಸಂಭ್ರಮ ಮುಗಿಲು ಮುಟ್ಟಿತ್ತು. ಭಾರತದ ಕಿರಿಯ ತಂಡದ ಆಟಗಾರರು ವೆಸ್ಟ್ ಇಂಡೀಸ್ ನೆಲದಲ್ಲಿ ಇತಿಹಾಸ ಸೃಷ್ಠಿಸಿದ್ದರು. ಕಾಮೆಂಟೇರ್ ಗಳನ್ನು India are World Champions again ಎಂದು ಜೋರಾಗಿ ಹರ್ಷೋದ್ಘಾರ ಮಾಡಿದರು.

Related posts

FIFA World Cup 2026 Cristiano Ronaldo Lionel Messi

fifa worldcup2026-ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ CR & LM ಯಂತ್ರಗಳು

June 24, 2026
ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

June 24, 2026

ಹೌದು..! ವೆಸ್ಟ್ ಇಂಡೀಸ್ ನ ಆಂಟಿಗ್ವಾ ನೆಲದಲ್ಲಿ ನಡೆದಿ ಅಂಡರ್ 19 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಜ್ಯೂನಿಯರ್ ಟೀಂ ಇಂಡಿಯಾ ನಾಲ್ಕು ವಿಕೆಟ್ ಗಳ ಜಯ ಸಾಧಿಸಿದೆ. ಆ ಮೂಲಕ ಐದನೇ ಬಾರಿಗೆ ಅಂಡರ್ 19 ವಿಶ್ವಕಪ್ ಗೆದ್ದು ಬೀಗಿದೆ. ಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್ ತಂಡವನ್ನು 4 ವಿಕೆಟ್ಗಳಿಂದ ಸೋಲಿಸಿದ ಭಾರತ ವೆಸ್ಟ್ಇಂಡೀಸ್ನಲ್ಲಿ ಅಜೇಯ ತಂಡವಾಗಿ ವಿಶ್ವಕಪ್ ಗೆ ಮುತ್ತಿಟ್ಟಿದೆ.

ಅಂದಹಾಗೆ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಿಂದಲೂ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಾ ಸಾಗಿದ ಇಂಗ್ಲೆಂಡ್ 91 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ  ಇಂಗ್ಲೆಂಡ್ ಗೆ ರೀವ್ ಮತ್ತು ಸೇಲ್ಸ್ ಆಸರೆಯಾದರು. ರೀವ್ ವೇಗದ ಆಟ ಆಡಿದರು. ಈ ಜೋಡಿ 8ನೇ ವಿಕೆಟ್ಗೆ 93 ರನ್ಗಳ ಜೊತೆಯಾಟ ಆಡಿತು. ಈ ಹಂತದಲ್ಲಿ ದಾಳಿಗಿಳಿದ ರವಿಕುಮಾರ್ 95 ರನ್ಗಳಿಸಿದ್ದ ರೀವ್ ವಿಕೆಟ್ ಹಾರಿಸಿದರು. ಇದರ ಬೆನ್ನಲ್ಲೇ ಥಾಮಸ್ ಆಸ್ಪಿನ್ ವಾಲ್ ಕೂಡ ಔಟಾದರು. ಇಂಗ್ಲೆಂಡ್ ತಂಡವನ್ನು ಭಾರತೀಯ ಬೌಲರ್ ಗಳು  44.5 ಓವರುಗಳಲ್ಲೇ ಆಲೌಟ್ ಮಾಡಿದರು. ಕೇವಲ 189 ರನ್ಗಳಿಗೆ  ಇಂಗ್ಲೆಂಡ್ ಆಲೌಟ್ ಆಗಿತ್ತು. ರಾಜ್ ಭಾವಾ 5, ರವಿಕುಮಾರ್ 4 ವಿಕೆಟ್ ಪಡೆದು ಮಿಂಚಿದರು.

 under-19-world-cup-india-beats-england saaksha tv

ಈ ಗುರಿಯನ್ನು ಬೆಟ್ಟಿದ ಟೀಂ ಇಂಡಿಯಾ, ಮೊದಲ ಓವರ್ ನಲ್ಲಿಯೇ ಶಾಕ್ ಕಂಡಿತು. ರಘುವಂಶಿ ಜೊಶುವಾಗೆ ವಿಕೆಟ್ ಒಪ್ಪಿಸಿದರು. ಬಳಿಕ  ಹರ್ನೂರ್ ಸಿಂಗ್ ಮತ್ತು ಶೇಕ್ ರಶೀದ್ ತಾಳ್ಮೆಯ ಆಟ ಆಡಿದರು.  2ನೇ ವಿಕೆಟ್ಗೆ ಈ ಜೋಡಿ 49 ರನ್ಗಳ ಜೊತೆಯಾಟ ಆಡಿತು. ಈ ಹಂತದಲ್ಲಿ ಅಸ್ಪಿನ್ ವಾಲ್ 21 ರನ್ಗಳಿಸಿದ್ದ ಹರ್ನೂರ್ ವಿಕೆಟ್ ಪಡೆದರು.

ಯಶ್ ಧುಲ್ ಮತ್ತು ಶೇಕ್ ರಶೀದ್ ಉತ್ತಮ ಜೊತೆಯಾಟ ಆಡಿದರು.  ರಶೀದ್ 50 ರನ್ಗಳಿಸಿ ಔಟಾದರು. ಇದರ ಬೆನ್ನಲ್ಲೇ ಯಶ್ ಧುಲ್ ಕೂಡ 17 ರನ್ಗಳಿಸಿ ಸೇಲ್ಸ್ ಗೆ ವಿಕೆಟ್ ಒಪ್ಪಿಸಿದರು.  ನಿಶಾಂತ್ ಸಿಂಧು ಮತ್ತು ರಾಜ್ ಭಾವಾ  ಕೌಂಟರ್ ಅಟ್ಯಾಕ್ ಮಾಡಿದರು.ಈ ಜೋಡಿ 73 ರನ್ಗಳ ಜೊತೆಯಾಟ ಆಡಿತು. ಈ ಹಂತದಲ್ಲಿ ಭಾವಾ 35 ರನ್ಗಳಿಸಿ ಔಟಾದರು. ಕೌಶಲ್ ಥಾಂಬೆ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಈ ಮಧ್ಯೆ ನಿಶಾಂತ್ ಸಿಂಧು ಅಜೇಯ ಅರ್ಧಶತಕ ಬಾರಿಸಿದರು. ಕ್ರೀಸ್ಗಿಳಿದ ದಿನೇಶ್ ಬಾನಾ ಸತತ 2 ಎಸೆತಗಳಲ್ಲಿ 2 ಸಿಕ್ಸರ್ ಬಾರಿಸುತ್ತಿದ್ದಂತೆ ಟೀಮ್ ಇಂಡಿಯಾ ಚಾಂಪಿಯನ್ ತಂಡವಾಗಿ ಸಂಭ್ರಮಿಸಿತು.

ಬ್ಯಾಟಿಂಗ್ ಬೌಲಿಂಗ್ ನಲ್ಲಿ ಮಿಂಚಿದ ರಾಜ್ ಬಾವಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದರು.

Tags: #Saaksha TVteam indiaunder-19-world-cupyash dull
ShareTweetSendShare
Join us on:

Related Posts

FIFA World Cup 2026 Cristiano Ronaldo Lionel Messi

fifa worldcup2026-ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ CR & LM ಯಂತ್ರಗಳು

by admin
June 24, 2026
0

  ಸಿಆರ್ & ಎಲ್‍ಎಂ..! ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ ಎರಡು ಅತ್ಯದ್ಭುತವಾದ ಮಾನವ ಯಂತ್ರಗಳು. ಹೌದು, 1985 ಮಾಡೆಲ್, ಪೋರ್ಚ್‍ಗಲ್ ಬ್ರ್ಯಾಂಡ್, ಚಾಸಿಸ್ ನಂಬರ್...

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

by Shwetha
June 24, 2026
0

ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ ಪ್ರಕರಣವು ರಾಜ್ಯ ಬಿಜೆಪಿಯಲ್ಲಿ ದೊಡ್ಡ ಮಟ್ಟದ ರಾಜಕೀಯ ಭೂಕಂಪಕ್ಕೆ ಕಾರಣವಾಗಿದೆ. ಇದು ಕೇವಲ ಒಂದು ಸೋಲಲ್ಲ, ಬದಲಾಗಿ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಯೋಜನೆಯಲ್ಲಿ ಎಡವಟ್ಟು; ಮಹಾಲೇಖಪಾಲರ ಕಚೇರಿಯಿಂದ ಸ್ಪಷ್ಟನೆ ಕೋರಿದ ಸರ್ಕಾರ

by Shwetha
June 24, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಹಲವು ಲೋಪದೋಷಗಳು ಪತ್ತೆಯಾಗಿದ್ದು, ಈ ಕುರಿತು ಮಹಾಲೇಖಪಾಲರ ಕಚೇರಿ (CAG) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಲಿಖಿತ ಸ್ಪಷ್ಟನೆ...

ಈಶ್ವರಪ್ಪಗೆ ಮಾನಸಿಕ ಸ್ಥಿಮಿತ ತಪ್ಪಿದೆ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ: ಭ್ರಷ್ಟಾಚಾರದ ಇತಿಹಾಸ ಇಟ್ಟುಕೊಂಡು ಬೇರೆಯವರನ್ನು ಟೀಕಿಸಬೇಡಿ – ಶಿವರಾಮ್ ಹೆಬ್ಬಾರ್ ಆಕ್ರೋಶ

ಈಶ್ವರಪ್ಪಗೆ ಮಾನಸಿಕ ಸ್ಥಿಮಿತ ತಪ್ಪಿದೆ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ: ಭ್ರಷ್ಟಾಚಾರದ ಇತಿಹಾಸ ಇಟ್ಟುಕೊಂಡು ಬೇರೆಯವರನ್ನು ಟೀಕಿಸಬೇಡಿ – ಶಿವರಾಮ್ ಹೆಬ್ಬಾರ್ ಆಕ್ರೋಶ

by Shwetha
June 24, 2026
0

ಶಿರಸಿ: ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಂಪೂರ್ಣವಾಗಿ ರಾಜಕೀಯ ದಿವಾಳಿತನಕ್ಕೆ ತಲುಪಿದ್ದಾರೆ ಎಂದು ಶಾಸಕ ಶಿವರಾಮ್ ಹೆಬ್ಬಾರ್...

ಡಿಕೆಶಿ ತಂತ್ರಕ್ಕೆ ಬಿಜೆಪಿ ತತ್ತರ: ಕೈ ಅಭ್ಯರ್ಥಿ ಗೆಲುವಿನ ಹಿಂದೆ ಅಡಗಿದೆಯೇ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ; ವಿಜಯೇಂದ್ರ ಮತ್ತು ಅಶೋಕ ನಾಯಕತ್ವಕ್ಕೆ ಎದುರಾಯ್ತು ಗಂಡಾಂತರ!

ಅಡ್ಡಮತದಾನ ವಿಚಾರ; ಧರ್ಮಸ್ಥಳದಲ್ಲಿ ಸಭೆ ಇಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ: ಆರ್. ಅಶೋಕ್

by Shwetha
June 24, 2026
0

ವಿಧಾನ ಪರಿಷತ್ (MLC) ಚುನಾವಣೆಯಲ್ಲಿ ನಡೆದಿರುವ ಅಡ್ಡಮತದಾನದ ವಿಚಾರವಾಗಿ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram