ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ 2024 ನ(ICC Under-19 World Cup 2024) ಸೆಮಿಫೈನಲ್ಲಿ ಭಾರತ ಹಾಗೂ ಆತಿಥೇಯ ತಂಡ ಸೆಣಸಾಟ ನಡೆಸಲಿದೆ.
ಸೂಪರ್ 6ನಲ್ಲಿ ಪಾಕಿಸ್ತಾನ ತಂಡ ರೋಚಕ ಪಂದ್ಯದಲ್ಲಿ ಬಾಂಗ್ಲಾದೇಶವನ್ನು (Pakistan vs Bangladesh) 5 ರನ್‌ಗಳಿಂದ ಸೋಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ. ಹೀಗಾಗಿ ಪ್ರಸಕ್ತ ಟೂರ್ನಿಯ ನಾಲ್ಕು ಸೆಮಿಫೈನಲ್ ತಂಡಗಳು ಖಚಿತವಾಗಿವೆ. ಭಾರತೀಯ ಯುವ ತಂಡ (Team India) ಸೂಪರ್ 6 ರ ಗುಂಪು 1 ರಲ್ಲಿ ಅಗ್ರಸ್ಥಾನದಲ್ಲಿದ್ದು, ಇದೇ ಗುಂಪಿನಲ್ಲಿರುವ ಪಾಕಿಸ್ತಾನ ಕೂಡ ಎರಡನೇ ಸ್ಥಾನ ಪಡೆಯುವ ಮೂಲಕ ಸೆಮಿಫೈನಲ್ ಪ್ರವೇಶಿದೆ. 2ನೇ ಗುಂಪಿನಲ್ಲಿ ಆಸ್ಟ್ರೇಲಿಯಾ ತಂಡ ಅಗ್ರಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಎರಡೂ ಸೆಮಿಫೈನಲ್ ಪಂದ್ಯಗಳು ಫೆಬ್ರವರಿ 6 ಹಾಗೂ 8ರಂದು ನಡೆಯಲಿವೆ.
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕ್ ಮಧ್ಯೆ ನಡೆಯಲಿದೆ. ಫೆಬ್ರವರಿ 11 ರಂದು ಫೈನಲ್ ಪಂದ್ಯ ನಡೆಯಲಿದ್ದು, ಈ ಟೂರ್ನಿಯಲ್ಲಿ ಭಾರತ ತಂಡ ಇಲ್ಲಿಯವರೆಗೆ ಅಜೇಯವಾಗಿದೆ. ಗ್ರೂಪ್ ಹಂತದಲ್ಲಿ ಎಲ್ಲಾ ಮೂರು ಪಂದ್ಯಗಳನ್ನು ಭಾರತ ಗೆದ್ದಿತ್ತು. ಆ ನಂತರ ಸೂಪರ್ 6ಸುತ್ತಿನಲ್ಲಿ ನ್ಯೂಜಿಲೆಂಡ್ ಮತ್ತು ನೇಪಾಳ ತಂಡಗಳನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ. ಯುವಕರ ತಂಡವಾದರೂ ಫೈನಲ್ ಗೆದ್ದು, ಕಪ್ ಹಿಡಿದು ದೇಶಕ್ಕೆ ಮರಳಲಿ ಎಂಬುವುದು ಭಾರತೀಯರ ಆಶಯವಾಗಿದೆ.