ಈಗಾಗಲೆ ಏರ್ ಲೈನ್ಸ್ ಸಂಸ್ಥೆಗಳು ಸಾಲದ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿವೆ. ಈ ಮದ್ಯೆ ಮತ್ತೊಂದು ಹೊಡೆತ ಅನುಭವಿಸಿ ಆತಂಕ ಒಳಗಾಗಿವೆ. ಕೊರೋನಾ ವೈರಸ್ ಕೇವಲ ಜನರ ಆರೋಗ್ಯದ ಮೇಲೆ ಮಾತ್ರ ದಾಳಿಮಾಡಿಲ್ಲ. ವ್ಯಾಪಕವಾಗಿ ಹರಡುವ ಕೊರೋನಾ ವೈರಸ್ ಕುರಿತು ಜನರಲ್ಲಿ ಭೀತಿ ಉಂಟು ಮಾಡಿದೆ. ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯು ತೀವ್ರವಾಗಿದೆ. ಈ ಕಾರಣಕ್ಕಾಗಿ ಪ್ರವಾಸಿಗರು ತಮ್ಮ ಪ್ರವಾಸವನ್ನು ರದ್ದು ಮಾಡುತ್ತಿದ್ದಾರೆ. ಸಿಂಗಾಪುರ, ಥೈವಾನ್, ಥೈಲ್ಯಾಂಡ್, ವಿಯೆಟ್ನಾಂ, ಕಂಬೋಡಿಯಾ ಮುಂತಾದ ರಾಷ್ಟ್ರಗಳಿಗೆ ಬಹುತೇಕ ಪ್ರಯಾಣಿಕರೇ ಇಲ್ಲದೆ ಖಾಲಿ ಹೊಡೆಯುತ್ತಿದೆ. ಏರ್ ಇಂಡಿಯಾ, ಗೋಏರ್, ಇಂಡಿಗೋ, ಸಿಲ್ಕ್ಏರ್, ಸಿಂಗಾಪುರ ಏರ್ಲೈನ್ಸ್ಗಳು ಸಿಂಗಾಪುರಕ್ಕೆ ಬೆಂಗಳೂರಿನಿಂದ ವಿಮಾನ ಸಂಪರ್ಕ ಹೊಂದಿವೆ. ಏರ್ಏಷಿಯಾ, ಪ್ರವಾಸ ಮತ್ತು ವ್ಯಾಪಾರಕ್ಕಾಗಿ ಬ್ಯಾಂಕಾಕ್, ಹಾಂಕಾಂಗ್ ತೆರಳುವ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖ ಕಂಡಿದೆ. ಇನ್ನು ಹೋಟಲ್ ಹಾಗೂ ಪ್ರವಾಸೋದ್ಯಮ ವಹಿವಾಟು ಪಾತಾಳಕ್ಕೆ ಇಳಿದಿದ್ದು, ಆರ್ಥಿಕತೆ ಮೇಲೆ ಪರೋಕ್ಷವಾಗಿಯೇ ಕೊರೋನಾ ದಾಳಿಗೆ ಇಳಿದಿದೆ.
ಬಿಡದಿ ಟೌನ್ಶಿಪ್ ಯೋಜನೆ ಜಾರಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ, ಯೋಜನೆ ಜಾರಿಗೆ ಅವಕಾಶ ನೀಡಲ್ಲ: ಪ್ರತಿಪಕ್ಷ ನಾಯಕ ಆರ್.ಅಶೋಕ
ಇದು ಕಾಂಗ್ರೆಸ್ ಸರ್ಕಾರದ ಶವಪೆಟ್ಟಿಗೆಗೆ ಕೊನೆಯ ಮೊಳೆ ಬಿಡದಿಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಪ್ರತಿಪಕ್ಷ ನಾಯಕರು ಬಿಡದಿ, ಬಿಡದಿ ಟೌನ್ಶಿಪ್ ಯೋಜನೆ ಜಾರಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ...








